ದುನಿಯಾ ವಿಜಯ್ ಗೆ ಡಿಸಿಪಿ ಅಣ್ಣಾಮಲೈ ಮಾಡಿದ ಖಡಕ್ ವಾರ್ನಿಂಗ್ ಏನು?

ಬೆಂಗಳೂರು, ಬುಧವಾರ, 7 ನವೆಂಬರ್ 2018 (14:52 IST)

ಬೆಂಗಳೂರು : ಕೌಟುಂಬಿಕ ಕಲಹ  ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾದ  ನಟ ದುನಿಯಾ ವಿಜಯ್ ಅವರಿಗೆ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಖಡಕ್ ವಾರ್ನಿಂಗ್ ಮಾಡಿದ್ದಾರೆ.


ದುನಿಯಾ ವಿಜಯ್ ಕುಟುಂಬದವರು ಪದೇಪದೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವುದಲ್ಲದೇ ಸಮಾಜದ ಶಾಂತಿ ಕದಡುತ್ತಿದ್ದಾರೆ ಎಂದು  ವಿಜಯ್ ಹಾಗೂ ಪತ್ನಿ ನಾಗರತ್ನ, ಕೀರ್ತಿಗೌಡ ಸೇರಿದಂತೆ ಏಳುಮಂದಿಗೆ 107 ಸೆಕ್ಷನ್ ಹಾಕಲಾಗಿತ್ತು. ಈ ಕುರಿತು ಡಿಸಿಪಿ ಅಣ್ಣಾಮಲೈ ಮುಂದೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಲಾಗಿತ್ತು.


ಇದೀಗ ವಿಚಾರಣೆಗೆ ಹಾಜರಾದ ವಿಜಯ್ ಅವರನ್ನು ವಿಚಾರಣೆ ನಡೆಸಿದ ಅಣ್ಣಾಮಲೈ ಇದು ಬೆಂಗಳೂರು ಅಥವಾ ಸಾರ್ವಜನಿಕ ಸಮಸ್ಯೆ ಅಲ್ಲ. ಹೀಗಾಗಿ ದುನಿಯಾ ವಿಜಯ್ ವಿಷಯವಾಗಿ ನಾನು ಮಾತನಾಡುವುದಿಲ್ಲ. ದುನಿಯಾ ವಿಜಿಯಿಂದ 5 ಲಕ್ಷ ಶ್ಯೂರಿಟಿಯನ್ನ ಬರೆಸಿಕೊಂಡಿದ್ದೀನಿ. ಮುಚ್ಚಳಿಕೆಯಲ್ಲಿ ಬರೆದುಕೊಟ್ಟಿದ್ದಾರೆ. ಅವರ ಅಪ್ಪ ಅಮ್ಮನಿಗೆ ವಯಸ್ಸಾಗಿದೆ.


ಹೀಗಾಗಿ ಜಸ್ಟ್ ವಾರ್ನಿಂಗ್ ಮಾಡಿದ್ದೇನೆ. ಇನ್ನೊಂದು ಬಾರಿ ಶಾಂತಿ ಕದಡುವಂತ ಕೆಲಸ ಮಾಡಿದರೆ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ವಿಜಯ್ ಗೆ ಅಣ್ಣಾಮಲೈ ಖಡಕ್ ವಾರ್ನಿಂಗ್ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೇದಾರ್​ನಾಥ್ ಚಿತ್ರಕ್ಕೆ ಎದುರಾಗಿದೆ ಸಂಕಷ್ಟ

ಮುಂಬೈ : ಸುಶಾಂತ್ ಸಿಂಗ್ ರಜಪೂತ್ ಹಾಗೂ ಸಾರಾ ಅಲಿ ಖಾನ್ ನಟನೆಯ ಕೇದಾರ್​ನಾಥ್ ಚಿತ್ರಕ್ಕೆ ಇದೀಗ ಸಂಕಷ್ಟ ...

news

ಶಾರುಖ್ ಖಾನ್ ವಿರುದ್ಧ ದೂರು ದಾಖಲು

ಮುಂಬೈ : ಝೀರೋ ಚಿತ್ರಕ್ಕೆ ಸಂಬಂಧಪಟ್ಟ ವಿಚಾರವೊಂದಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಅವರ ವಿರುದ್ಧ ಸಿಖ್ ...

news

ಯಶ್ – ರಾಧಿಕಾ ದಂಪತಿಗಳಿಗೆ ಡಿಸೆಂಬರ್ ನಲ್ಲಿ ಡಬಲ್ ಖುಷಿ. ಯಾಕೆ ಗೊತ್ತಾ?

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಕನಸಿನ ಕುಡಿ ಜಗತ್ತಿಗೆ ಎಂಟ್ರಿ ಕೊಡಲು ಡೇಟ್ ...

news

10 ಕೋಟಿ ಆಫರ್ ತಿರಸ್ಕರಿಸಿದ ನಟ ನೀನಾಸಂ ಸತೀಶ್. ಕಾರಣವೇನು ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ಬಾರೀ ಡಿಮ್ಯಾಂಡ್ ಇರುವ ನಟರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರು, ಇದೀಗ ...