ಮತ ಚಲಾಯಿಸದ ಕಾಲಿವುಡ್ ಸೆಲೆಬ್ರಿಟಿಗಳು ಯಾರು ಗೊತ್ತಾ?

ಚೆನ್ನೈ| pavithra| Last Updated: ಗುರುವಾರ, 8 ಏಪ್ರಿಲ್ 2021 (11:27 IST)
ಚೆನ್ನೈ : ಮಾರ್ಚ್ 6ರಂದು ನಡೆದ ತಮಿಳುನಾಡಿನ ಚುನಾವಣೆಯಲ್ಲಿ ಚಿತ್ರರಂಗದ ಹಲವಾರು ತಾರೆಯರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಆದರೆ ಕೆಲವು ಸೆಲೆಬ್ರಿಟಿಗಳು ಚಲಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಕಾಲಿವುಡ್ ನ ನಟರಾದ ವಿಜಯ್, ಸೂರ್ಯ, ಅಜಿತ್, ಕಮಲ್ ಹಾಸನ್, ವಿಕ್ರಮ್, ರಜನೀಕಾಂತ್ ಸೇರಿದಂತೆ ಹೆಚ್ಚಿನ ಸೆಲೆಬ್ರಿಟಿಗಳು ತಮ್ಮ ಕುಟುಂಬದವರೊಂದಿಗೆ ಬಂದು ತಮ್ಮ ತಮ್ಮ ಮತವನ್ನು ಚಲಾಯಿಸಿದ್ದಾರೆ.

ಆದರೆ ನಯನತಾರಾ, ವಿಶಾಲ್, ಆರ್ಯ, ಧನುಷ್ , ನಿರ್ದೇಶಕರಾದ ವೆಟ್ರಿಮಾರನ್ ,  ಮಣಿರತ್ನಂ,  ಮುಂತಾದವರು ತಮ್ಮ ಮತ ಚಲಾಯಿಸಲಿಲ್ಲ ಎಂಬುದಾಗಿ ತಿಳಿದುಬಂದಿದೆ. ನಟ ಧನುಷ್ ಅವರು ಹಾಲಿವುಡ್ ಚಿತ್ರದ ಶೂಟಿಂಗ್ ಗಾಗಿ ಯುಎಸ್ ಎನಲ್ಲಿದ್ದ ಕಾರಣ, ಕೊರೊನಾ ಕಾರಣದಿಂದ ಪ್ರಯಾಣಿಸಲು ಸಾಧ್ಯವಾಗದ ಕಾರಣ ಮತ ಚಲಾಯಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :