ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆ: ಡಾಲಿ ಧನಂಜಯ

ಬೆಂಗಳೂರು| Krishnaveni K| Last Modified ಮಂಗಳವಾರ, 14 ಸೆಪ್ಟಂಬರ್ 2021 (10:35 IST)
ಬೆಂಗಳೂರು: ಇಂದು ರಾಷ್ಟ್ರೀಯ ಹಿಂದಿ ದಿವಸ್ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ನಟ ಡಾಲಿ ಧನಂಜಯ್ ಮಾಡಿರುವ ಟ್ವೀಟ್ ಒಂದು ಗಮನ ಸೆಳೆಯುತ್ತಿದೆ.
 

ಯಾವುದೇ ಭಾಷೆಯನ್ನು ಕಲಿಯಲೇಬೇಕು ಎನ್ನುವುದು ಹೇರುವುದು ದಬ್ಬಾಳಿಕೆಯಾಗುತ್ತದೆ ಎಂದು ಹಿಂದಿ ದಿವಸ್ ಆಚರಣೆಯ ದಿನ ಧನಂಜಯ್ ಟ್ವೀಟ್ ಮಾಡಿದ್ದಾರೆ.
 
ಎಲ್ಲಾ ಭಾಷೆಯನ್ನು ಗೌರವಿಸುತ್ತೇವೆ. ಆದರೆ ಯಾವುದೇ ಭಾಷೆಯ ಹೇರಿಕೆ ಸಲ್ಲದು. ಹಿಂದಿಯನ್ನಾಗಲೀ, ಇಂಗ್ಲಿಷ್ ನ್ನಾಗಲೀ ಎಲ್ಲರೂ ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚನೆಯಲ್ಲದೆ ಮತ್ತೇನು? ಎಂದು ಧನಂಜಯ್ ಪ್ರಶ್ನಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :