Widgets Magazine

ಡ್ರಗ್ಸ್ ಕೇಸ್ : ನಟಿ ರಾಗಿಣಿ ಬಗ್ಗೆ ಸಚಿವರು ಸಿಡಿಸಿದ ಹೊಸ ಬಾಂಬ್

ಬೆಂಗಳೂರು| Jagadeesh| Last Modified ಗುರುವಾರ, 10 ಸೆಪ್ಟಂಬರ್ 2020 (18:53 IST)
ಸ್ಯಾಂಡಲ್ ವುಡ್ ನ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಕೇಸ್ ನಲ್ಲಿ ಅಂದರ್ ಆಗಿದ್ದಾರೆ.
 

ನಟಿ ರಾಗಿಣಿ ಈ ಹಿಂದೆ ಚುನಾವಣೆ ಸಮಯದಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಿದ್ದಕ್ಕೆ ಸಚಿವ ರಮೇಶ್ ಜಾರಕಿಹೊಳಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
 
ಸಿನಿಮಾ ನಟಿ ರಾಗಿಣಿ ಅಂತ ತಿಳಿದುಕೊಂಡು ಬಿಜೆಪಿ ಪರವಾಗಿ ಪ್ರಚಾರಕ್ಕೆ ಕರೆಸಿದ್ದೆವು. ಆದರೆ ಡ್ರಗ್ ಹುಡಿಗಿಯಂತೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  
 

ರಾಗಿಣಿ ಜೊತೆಗಿರುವ ಫೋಟೋದಲ್ಲಿ ಎಲ್ಲರೂ ಇರಬಹುದು. ನನ್ನ ಜೊತೆಯ ಫೋಟೋ ಇರಬಹುದು. ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ ಜೊತೆಗೆ ರಾಗಿಣಿಯ ಫೋಟೋ ಇರಬಹುದು ಎಂದರು.

ಡ್ರಗ್ಸ್ ಕೇಸ್ ವಿರುದ್ಧ ಸರಕಾರ ಗಂಭೀರ ಕ್ರಮ ಕೈಗೊಳ್ಳಲಿದೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
 






ಇದರಲ್ಲಿ ಇನ್ನಷ್ಟು ಓದಿ :