ಮನೆ ವಿಚಾರಕ್ಕೆ ಮತ್ತೆ ದುನಿಯಾ ವಿಜಯ್ ಕುಟುಂಬದ ನಡುವೆ ಕಿತ್ತಾಟ

ಬೆಂಗಳೂರು, ಸೋಮವಾರ, 3 ಡಿಸೆಂಬರ್ 2018 (10:28 IST)

ಬೆಂಗಳೂರು : ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ದುನಿಯಾ ವಿಜಯ್ ಕುಟುಂಬದ ನಡುವೆ ಮತ್ತೆ ಕಿತ್ತಾಟ ಶುರುವಾಗಿದೆ.


ಮನೆಗಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿಯನ್ನು ಭೇಟಿಯಾಗಿ ತಮ್ಮ ಪತಿ ವಿಜಿ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಚನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆಯ ಹಿಂಭಾಗದಲ್ಲಿರೋ ದುನಿಯಾ ವಿಜಿ ಮನೆಯಿದ್ದು, ವಿಜಿ ತನಗೆ ಹೇಳದೇ ತಮ್ಮ ಮನೆಯನ್ನು ಸ್ನೇಹಿತ, ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರಿಗೆ ಮಾರಿದ್ದಾರೆ ಎಂದು ನಾಗರತ್ನ ಆರೋಪಿಸುತ್ತಿದ್ದಾರೆ.


ಅಲ್ಲದೇ ನನಗೆ ಸರಿಯಾಗಿ ಜೀವನಾಂಶ ತಲುಪಿಲ್ಲ ಎಂದು ನಾಗರತ್ನ ಮಹಿಳಾ ಆಯೋಗದ ಮೋರೆ ಹೋಗಲು ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ನಾಗಲಕ್ಷೀ ಬಾಯಿ ಅವರಲ್ಲಿ ಮೌಖಿಕವಾಗಿ ನಾಗರತ್ನ ದೂರು ನೀಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷೀ ಬಾಯಿ ಭೇಟಿ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ದರ್ಶನ್ ಗೆ ಬಿಬಿಎಂಪಿ ದಂಡ ವಿಧಿಸಿದ್ಯಾಕೆ ಗೊತ್ತಾ?

ಬೆಂಗಳೂರು : ಆಸ್ತಿ ತೆರಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬೃಹತ್ ...

news

ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಎಸ್.ನಾಗರಾಜ ಶೆಟ್ಟಿ ನಿಧನ

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ನಿರ್ಮಾಪಕ ಎಸ್.ನಾಗರಾಜ ಶೆಟ್ಟಿ ...

news

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಿಯಾಂಕ ಚೋಪ್ರಾ

ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ಗೆಳೆಯ ಅಮೇರಿಕಾದ ಸಿಂಗರ್ ನಿಕ್​ ಜೋನಾಸ್​​ ಜೊತೆ ...

news

ಯಶ್- ರಾಧಿಕಾ ಪುತ್ರಿಗೆ ಅಭಿಮಾನಿಗಳು ಇಟ್ಟ ಹೆಸರೇನು ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ಯಶ್- ರಾಧಿಕಾ ಅವರ ಮುದ್ದಾದ ಹೆಣ್ಣು ಮಗುವಿಗೆ ಇದೀಗ ...