ಜೊತೆ ಜೊತೆಯಲಿ ಕನ್ನಡ ಧಾರವಾಹಿಗೆ ಎಂಟ್ರಿ ಕೊಡಲಿರುವ ಹಿಂದಿ ನಟಿ?

ಬೆಂಗಳೂರು| Krishnaveni K| Last Updated: ಗುರುವಾರ, 18 ಫೆಬ್ರವರಿ 2021 (11:08 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಜೊತೆ ಜೊತೆಯಲಿ ಕನ್ನಡ ಧಾರವಾಹಿಗೆ ಹಿಂದಿ ನಟಿಯೊಬ್ಬರ ಆಗಮನವಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
 

ಹಿಂದಿ ಕಿರುತೆರೆಯಲ್ಲಿ ಖ್ಯಾತರಾಗಿರುವ ಸ್ಯಾಂಡಲ್ ವುಡ್ ನಲ್ಲಿ ‘ನಿನ್ನಿಂದಲೆ’ ಸಿನಿಮಾದಲ್ಲಿ ಅಭಿನಯಿಸಿರುವ ಎರಿಕಾ ಫರ್ನಾಂಡಿಸ್ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಾಯಕ ಆರ್ಯವರ್ಧನ್ ಮಾಜಿ ಪತ್ನಿ ‘ರಾಜನಂದಿನಿ’ ಪಾತ್ರ ಮಾಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ರಾಜನಂದಿನಿ ಪಾತ್ರದ ಪಾರ್ಶ್ವ ಭಾಗವನ್ನು ತೋರಿಸುವ ಮೂಲಕ ಧಾರವಾಹಿ ತಂಡ ವೀಕ್ಷಕರನ್ನು ಸಸ್ಪೆನ್ಸ್ ನಲ್ಲಿಟ್ಟಿದೆ. ಮುಂದೆ ರಾಜನಂದಿನಿ ಕತೆ ಆರಂಭವಾಗಲಿದೆ. ಈಗಾಗಲೇ ಹಲವು ಖ್ಯಾತ ನಟರು ಈ ಧಾರವಾಹಿಯಲ್ಲಿ ಅಭಿನಯಿಸಿದ್ದಾರೆ. ಇದೀಗ ಮತ್ತೊಬ್ಬ ಹಿಂದಿ ನಟಿಯ ಹೆಸರು ಕೇಳಿಬರುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :