ಸಿನಿಮಾ, ಧಾರವಾಹಿ ಮಂದಿಗೆ ಸಿಹಿ ಸುದ್ದಿ

ಬೆಂಗಳೂರು| Krishnaveni K| Last Modified ಶುಕ್ರವಾರ, 4 ಜೂನ್ 2021 (09:25 IST)
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಒಂದು ವಾರ ಲಾಕ್ ಡೌನ್ ಮುಂದುವರಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಸಿನಿಮಾ, ಧಾರವಾಹಿ ಮಂದಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.  
> ಶೂಟಿಂಗ್ ಇಲ್ಲದೇ ಈ ಕ್ಷೇತ್ರದ ಕಲಾವಿದರು, ತಂತ್ರಜ್ಞರು ನಿತ್ಯದ ಊಟಕ್ಕೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಕಲಾವಿದರಿಗೆ ಆರ್ಥಿಕ ನೆರವು ನೀಡಬೇಕೆಂದು ಸಂಸದೆ ಸುಮಲತಾ ಅಂಬರೀಶ್ ನೇತೃತ್ವದಲ್ಲಿ ಈಗಾಗಲೇ ಸಿಎಂಗೆ ಮನವಿ ಸಲ್ಲಿಸಲಾಗಿತ್ತು.>   ಆ ಮನವಿಗೆ ಸ್ಪಂದಿಸಿರುವ ಸಿಎಂ ನಿನ್ನೆ ಘೋಷಿಸಿರುವ 500 ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ನಲ್ಲಿ ಕಲಾವಿದರಿಗೂ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ಸಂಕಷ್ಟದಲ್ಲಿರುವ ಸಿನಿಮಾ, ಧಾರವಾಹಿ ಮಂದಿಗೆ ಇದು ಸಿಹಿ ಸುದ್ದಿ.ಇದರಲ್ಲಿ ಇನ್ನಷ್ಟು ಓದಿ :