ಜಿಮ್ ಗೆ ಮರಳಿದ ಸಿನಿ ತಾರೆಯರು

ಬೆಂಗಳೂರು| Krishnaveni K| Last Modified ಬುಧವಾರ, 23 ಜೂನ್ 2021 (09:46 IST)
ಬೆಂಗಳೂರು: ಲಾಕ್ ಡೌನ್, ಕೊರೋನಾ ಭೀತಿಯಿಂದ ಜಿಮ್ ಗಳು ಖಾಲಿ ಬಿದ್ದಿದ್ದವು. ಲಾಕ್ ಡೌನ್ ವೇಳೆ ಜಿಮ್ ತೆರೆಯದೇ ತಾರೆಯರು ಮನೆಯಲ್ಲೇ ವರ್ಕೌಟ್ ಮಾಡುವಂತಾಗಿತ್ತು.
 > ಇದೀಗ ಅನ್ ಲಾಕ್ 2.0 ರಲ್ಲಿ ಸರ್ಕಾರ ಜಿಮ್ ಗಳನ್ನು ತೆರೆಯಲು ಅವಕಾಶ ನೀಡಿದೆ. ಹೀಗಾಗಿ ಸಿನಿ ತಾರೆಯರು ತಮ್ಮ ದೇಹ ದಾರ್ಡ್ಯ ಕಾಪಾಡಿಕೊಳ್ಳಲು ಮತ್ತೆ ಜಿಮ್ ನತ್ತ ಮುಖ ಮಾಡಿದ್ದಾರೆ.>   ಆದರೂ ಮೊದಲಿನಷ್ಟು ಜಿಮ್ ಗಳಲ್ಲಿ ಗ್ರಾಹಕರು ಇಲ್ಲದೇ ಇದ್ದರೂ ವರ್ಕೌಟ್ ಗೆ ಪ್ರಾಮುಖ್ಯತೆ ಕೊಡುವ ತಾರೆಯರು ಅನಿವಾರ್ಯವಾಗಿ ಮರಳಿದ್ದಾರೆ. ನಟ ಚಂದನ್ ಕುಮಾರ್ 1 ವರ್ಷದ ಬಳಿಕ ಜಿಮ್ ಗೆ ಮರಳಿರುವುದಾಗಿ ಹೇಳಿದ್ದಾರೆ. ಇನ್ನೇನು ಸಿನಿಮಾ ಚಿತ್ರೀಕರಣವೂ ಪ್ರಾರಂಭವಾಗುತ್ತಿದೆ. ಇದಕ್ಕೂ ಮೊದಲು ಫಿಟ್ ಆಗುವತ್ತ ತಾರೆಯರು ಗಮನ ಹರಿಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :