Widgets Magazine

ಗಾಳಿಪಟ ಸಿನಿಮಾಗೂ ಗಾಳಿಪಟ 2 ಗೂ ಸಂಬಂಧವೇ ಇಲ್ವಂತೆ!

ಬೆಂಗಳೂರು| Krishnaveni K| Last Modified ಗುರುವಾರ, 12 ಡಿಸೆಂಬರ್ 2019 (09:01 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿದ್ದ ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2008 ರಲ್ಲಿ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿತ್ತು. ಅದೇ ಟೈಟಲ್ ಇಟ್ಟುಕೊಂಡು ಭಟ್ಟರು ಮತ್ತು ಗಣೇಶ್ ಜೋಡಿ ಮತ್ತೊಂದು ಸಿನಿಮಾ ಮಾಡುತ್ತಿದೆ.

 
ಅದೇ ಟೀಂ ಎಂಬ ಸಿನಿಮಾ ಈಗಾಗಲೇ ಆರಂಭಿಸಿದೆ. ಕುದುರೆಮುಖದ ಪ್ರಕೃತಿ ತಾಣದಲ್ಲಿ ಈಗಾಗಲೇ ಚಿತ್ರೀಕರಣ ಭರದಿಂದ ಸಾಗುತ್ತಿದೆ.
 
ಆದರೆ ಅಂದಿನ ಗಾಳಿಪಟ ಕತೆಯ ಮುಂದುವರಿದ ಭಾಗ ಇದಲ್ಲ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಆ ಗಾಳಿಪಟ ಸಿನಿಮಾಗೂ ಈ ಗಾಳಿಪಟ ಸಿನಿಮಾ ಕತೆಗೂ ಸಂಬಂಧವಿಲ್ಲ. ಆದರೆ ಅಂತಹದ್ದೇ ಒಂದು ರೊಮ್ಯಾಂಟಿಕ್ ಕತೆ ಈ ಸಿನಿಮಾದಲ್ಲೂ ಇರಲಿದೆಯಂತೆ. ಹಾಗಾಗಿ ಅಂದಿನ ಕತೆಯನ್ನೇ ತಲೆಯಲ್ಲಿಟ್ಟುಕೊಂಡು ಏನೇನೋ ನಿರೀಕ್ಷೆ ಬೇಡ ಎಂದು ಚಿತ್ರತಂಡ ಮೊದಲೇ ವಾಸ್ತವಾಂಶ ಹೇಳಿದೆ.




ಇದರಲ್ಲಿ ಇನ್ನಷ್ಟು ಓದಿ :