ಕೊರೋನಾ ರಜೆಯಲ್ಲಿ ಡೈನಿಂಗ್ ಟೇಬಲ್ ಮೇಲೆ ನಟ ಗಣೇಶ್ ಟೇಬಲ್ ಟೆನ್ನಿಸ್

ಬೆಂಗಳೂರು| Krishnaveni K| Last Updated: ಸೋಮವಾರ, 23 ಮಾರ್ಚ್ 2020 (11:24 IST)
ಬೆಂಗಳೂರು: ಕೊರೋನಾವೈರಸ್ ಹರಡದಂತೆ ತಡೆಯಲು ಚಿತ್ರರಂಗಕ್ಕೆ ನೀಡಲಾಗಿರುವ ರಜೆಯನ್ನು ಚಿತ್ರನಟರು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ರಜೆಯಲ್ಲಿ ಮಜಾ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

 
ರಜೆಯಲ್ಲಿ ಪತ್ನಿ ಶಿಲ್ಪಾ ಗಣೇಶ್ ಜತೆಗೆ ತಮ್ಮ ಮನೆಯ ಡೈನಿಂಗ್ ಟೇಬಲ್ ನ್ನೇ ಟೇಬಲ್ ಟೆನ್ನಿಸ್ ಅಂಗಣ ಮಾಡಿಕೊಂಡ ಗಣೇಶ್ ಆಟವಾಡಿ ಮಜಾ ಮಾಡುತ್ತಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
 
ಈಗ ಸಿಕ್ಕಿರುವ ರಜೆಯನ್ನು ಆರಾಮವಾಗಿ ಕುಟುಂಬದ ಜತೆ ಕ್ರಿಯೇಟಿವ್ ಆಗಿ ಕಾಲ ಕಳೆಯಲು ಬಳಸಿಕೊಳ್ಳಿ ಎಂದು ಗಣೇಶ್ ಸಲಹೆಯನ್ನೂ ಕೊಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :