Widgets Magazine

ಇನ್ನಷ್ಟು ಕುತೂಹಲ ಹೆಚ್ಚಿಸಿದ 'ಜಂಟಲ್ ಮ್ಯಾನ್'

gentle man
ಬೆಂಗಳೂರು| rajesh patil| Last Updated: ಸೋಮವಾರ, 6 ಜನವರಿ 2020 (18:16 IST)
ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಸಿನಿಮಾದ ಬಗ್ಗೆ ಈಗಾಗಲೇ ಎಲ್ಲರಿಗೂ ಗೊತ್ತೆ ಇದೆ. ಸ್ಲೀಪಿಂಗ್ ಸಿಂಡ್ರೋಮ್ ಕಾಯಿಲೆ ಇರುವ ವ್ಯಕ್ತಿಯ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಳ್ಳುತ್ತಿದ್ದು, ಹೇಗೆ ಅಭಿನಯಿಸಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಚಿತ್ರತಂಡ ಆ ಕುತೂಹಲಕ್ಕೆ ಸ್ವಲ್ಪ ಬ್ರೇಕ್ ಹಾಕಿ ಒಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 'ಜಂಟಲ್ ಮ್ಯಾನ್' ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ನಿರೀಕ್ಷೆ ಹೆಚ್ಚಿಸಿದೆ.
ಟ್ರೇಲರ್ ನೋಡಿದವರಿಗೆ ಡೈನಾಮಿಕ್ ಪ್ರಿನ್ಸ್ ಇನ್ನಷ್ಟು ಇಷ್ಟವಾಗಿದ್ದಾರೆ. ಈ ಹಿಂದೆ ಮಾಡದ ಪಾತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಪ್ರಜ್ವಲ್ ಕೇವಲ ಸ್ಲೀಪಿಂಗ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿರುತ್ತಾರೆ.
gentle man

ಎಚ್ಚರವಿರುವ 6 ಗಂಟೆಗಳಲ್ಲಿ ಪ್ರೀತಿ, ಫೈಟ್, ಊಟ ಎಲ್ಲವನ್ನು ಮಾಡ್ತಾರೆ ಅನ್ನೋದಷ್ಟೇ ಗೊತ್ತಿತ್ತು. ಆದ್ರೆ ಟ್ರೇಲರ್ ನೋಡಿದ ಪ್ರತಿಯೊಬ್ಬರಲ್ಲೂ ಕಥೆ ಹೇಗಿರಬಹುದೆಂಬ ಕುತೂಹಲ ಹುಟ್ಟಿದೆ. ಟ್ರೇಲರ್ ನಲ್ಲಿ ಮೊದಲಿಗೆ ಕಾಯಿಲೆ ಬಗ್ಗೆ ಹೇಳಲಾಗಿದೆ.
gentle man

ಆ ನಂತರದಲ್ಲಿ ಬರುವ ಅದ್ಯಾವುದೋ ಗ್ಯಾಂಗ್ ಸ್ವಲ್ಪ ಮೈನಡುಗಿಸುತ್ತೆ. ಟ್ರೇಲರ್ ನೋಡಿದ ನಂತರದಲ್ಲಿ ಹುಟ್ಟುವ ಪ್ರಶ್ನೆ ಅಂದ್ರೆ ಪ್ರಜ್ವಲ್ ದೇವರಾಜ್ ಎಚ್ಚರವಿರುವ ಆ 6 ಗಂಟೆಯಲ್ಲಿ ಆ ಗ್ಯಾಂಗ್ ಜೊತೆ ಹೇಗೆ ಹೋರಾಡ್ತಾರೆ..? ತನ್ನವರು ಆ ಸುಳಿಗೆ ಸಿಕ್ಕಾಗ ಹೇಗೆ ಬಚಾವ್ ಮಾಡ್ತಾರೆ ಅನ್ನೋ ಹಲವು ಪ್ರಶ್ನೆಗಳು ಕಣ್ ಮುಂದೆ ಬರುತ್ತವೆ. ಇದಕ್ಕೆಲ್ಲ ಉತ್ತರ ಸಿನಿಮಾದಲ್ಲಿ ಮಾತ್ರ ಸಿಗಬಹುದು.
gentle man
ರಿಲೀಸ್ ಗೆ ರೆಡಿಯಾಗಿರುವ 'ಜಂಟಲ್ ಮ್ಯಾನ್' ಚಿತ್ರವನ್ನು ಜಿ. ಸಿನಿಮಾಸ್ ಬ್ಯಾನರ್ ನಲ್ಲಿ ಗುರುದೇಶ ಪಾಂಡೆ ನಿರ್ಮಾಣ ಮಾಡಿದ್ದಾರೆ. ಜಡೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ತಬಲ ನಾಣಿ, ಅರುಣಾ ಬಾಲರಾಜ್, ಸಾಧು ಕೋಕಿಲಾ ಸೇರಿದಂತೆ ಬಹುತೇಕರು ನಟಿಸಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :