ತೆರೆ ಮೇಲೆ ಮತ್ತೆ ಯಶ್-ರಾಧಿಕಾ ಪಂಡಿತ್! ನವಂಬರ್ 8 ಕ್ಕೆ ಸಿನಿಮಾ ರಿಲೀಸ್!

ಬೆಂಗಳೂರು| Krishnaveni K| Last Modified ಮಂಗಳವಾರ, 5 ನವೆಂಬರ್ 2019 (09:12 IST)
ಬೆಂಗಳೂರು: ಅರೇ...! ಎರಡನೇ ಮಗುವಿನ ಹೆರಿಗೆಯಾದ ಬಳಿಕ ವಿಶ್ರಾಂತಿಯಲ್ಲಿರುವ ರಾಧಿಕಾ ಪಂಡಿತ್ ಯಾವಾಗ ಯಶ್ ಜತೆಗೆ ಸಿನಿಮಾ ಮಾಡಿದರು ಎಂದುಕೊಳ್ಳುತ್ತಿದ್ದೀರಾ? ಅಚ್ಚರಿಯಾದರೂ ನೀವು ನಂಬಲೇಬೇಕು. ಈ ರಾಕಿಂಗ್ ಜೋಡಿಯ ಮೋಡಿಯನ್ನು ನೀವು ಇದೇ ತಿಂಗಳು 8 ರಂದು ಬೆಳ್ಳಿ ತೆರೆಯಲ್ಲಿ ನೋಡಿ ಆನಂದಿಸಬಹುದು!

 
ಆದರೆ ಇವರಿಬ್ಬರ ನಟನೆಯ ಸಿನಿಮಾವಲ್ಲ. ರಾಧಿಕಾ ಮತ್ತು ಯಶ್ ಧ್ವನಿ ನೀಡಿರುವ ಮಕ್ಕಳ ಕಮರ್ಷಿಯಲ್ ಚಿತ್ರ ಗಿರ್ಮಿಟ್ ನವಂಬರ್ 8 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಹೀರೋ ಮತ್ತು ಹೀರೋಯಿನ್ ಪಾತ್ರಧಾರಿಗಳಿಗೆ ಯಶ್-ರಾಧಿಕಾ ಧ್ವನಿ ನೀಡಿದ್ದಾರೆ. ಹೀಗಾಗಿ ಅವರ ಧ್ವನಿ ಕೇಳಿ ಎಂಜಾಯ್ ಮಾಡಬಹುದು.
 
ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರ ಗಿರ್ಮಿಟ್ ಸಿನಿಮಾ ಇದೇ ತಿಂಗಳು 8 ರಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು, ರಾಧಿಕಾ-ಯಶ್ ಧ್ವನಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :