ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಟ್ರೈಲರ್ ಬಿಡುಗಡೆ ದಿನಾಂಕ ಫಿಕ್ಸ್

ಬೆಂಗಳೂರು| Krishnaveni K| Last Modified ಸೋಮವಾರ, 9 ಸೆಪ್ಟಂಬರ್ 2019 (10:16 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಗೀತಾ ಟ್ರೈಲರ್ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗುತ್ತಿದೆ.
 

ಗೀತಾ ಸಿನಿಮಾ ಸೆಪ್ಟೆಂಬರ್ 27 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಪರ ಹೋರಾಟದ ಮೂಲವಿಟ್ಟುಕೊಂಡು ಮಾಡಿರುವ ಸಿನಿಮಾ ಗೀತಾ. ಈ ಸಿನಿಮಾಗಾಗಿ ಪುನೀತ್ ರಾಜ್ ಕುಮಾರ್ ಹಾಡಿರುವ ಕನ್ನಡ ಎಂಬ ಥೀಮ್ ಸಾಂಗ್ ಈಗಾಗಲೇ ಹಿಟ್ ಆಗಿದೆ.
 
ಗಣೇಶ್ ಕೂಡಾ ಹೊಸ ಲುಕ್, ಶೇಡ್ ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ಸಿನಿಮಾ ಬಗ್ಗೆ ಹೊಸ ನಿರೀಕ್ಷೆಯಿದೆ.
ಇದರಲ್ಲಿ ಇನ್ನಷ್ಟು ಓದಿ :