ಇಂದು ವಿಚಾರಣೆಗೆ ಹಾಜರಾದ ಹಂಸಲೇಖ!

ಬೆಂಗಳೂರು| Ramya kosira| Last Modified ಗುರುವಾರ, 25 ನವೆಂಬರ್ 2021 (19:50 IST)

ಪೇಜಾವರ ಶ್ರೀಗಳ ಕುರಿತ ಹೇಳಿಕೆ ಕುರಿತಂತೆ ಇವತ್ತು ಬಸವನಗುಡಿ ಪೊಲೀಸ್ ಠಾಣೆಗೆ ನಾದಬ್ರಹ್ಮ ಹಂಸಲೇಖ ವಿಚಾರಣೆಗೆ ಹಾಜರಾಗಿದ್ದರು.
ಇನ್ಸ್ಪೆಕ್ಟರ್ ರಮೇಶ್ ನೇತೃತ್ವದಲ್ಲಿ ವಿಚಾರಣೆ ಎದುರಿಸಿದರು. ವಿಚಾರಣೆ ನಡೆಯುತ್ತಿದ್ದ ವೇಳೆ ಹಂಸಲೇಖ ಅವರು ಭಾವುಕರಾಗಿ ಮಾತನಾಡಿ, ಪೇಜಾವರ ಶ್ರೀಗಳ ಬಗ್ಗೆ ನನಗೆ ಗೌರವವಿದೆ ನನ್ನ ಹೇಳಿಕೆಯಲ್ಲಿ ಅಪಾರ್ಥವಿರಲಿಲ್ಲ ಅಂತೇಳಿ ಕಣ್ಣೀರ ಪ್ರಸಂಗವೂ ನಡೆಯಿತು. ಇನ್ನು ಪೊಲೀಸರು ಕೇಳಿದ ಅಷ್ಟು ಪ್ರಶ್ನೆಗಳಿಗೆ ಸಂಗೀತ ಮಾಂತ್ರಿಕ ಹಂಸಲೇಖ ಉತ್ತರಿಸಿ, ಬಳಿಕ ಮನೆಗೆ ವಾಪಸ್ಸಾಗಿದ್ದಾರೆ. ಆ ನಂತರ ಹಂಸಲೇಖ ಪರ ವಕೀಲ ದ್ವಾರಕನಾಥ್ ಮಾತನಾಡಿ, ನಾವು ಕಾನೂನಿಗೆ ಗೌರವ ಕೊಡ್ತೀವಿ ಮತ್ತೆ ವಿಚಾರಣೆಗೆ ಕರೆದರೆ ಬರ್ತಿವಿ. ಸದ್ಯಕ್ಕೆ ಮುಂದಿನ ವಿಚಾರಣೆ ಬಗ್ಗೆ ದಿನಾಂಕ ಕೊಟ್ಟಿಲ್ಲ ಅಗತ್ಯವಿದ್ದರೆ ವಿಚಾರಣೆ ಕರೆಯುತ್ತೇವೆ ಅಂತ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :