ರತ್ನಮಂಜರಿಯಲ್ಲಿದೆಯಾ ಹಾರರ್ ವೃತ್ತಾಂತ?

ಬೆಂಗಳೂರು, ಶನಿವಾರ, 11 ಮೇ 2019 (18:12 IST)

ಶೀರ್ಷಿಕೆಯ ಮೂಲಕವೇ ಸೆಳೆಯೋ ಒಂದಷ್ಟು ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ದಶಕಗಳಷ್ಟು ಹಿಂದೆ ತೆರೆ ಕಂಡು ಸೂಪರ್ ಹಿಟ್ ಆಗಿದ್ದ ಚಿತ್ರ ರತ್ನಮಂಜರಿ. ಇದೀಗ ಅದೇ ಹೆಸರಿನ ರತ್ನಮಂಜರಿ ಚಿತ್ರವೀಗ ಇದೇ ತಿಂಗಳ ಹದಿನೇಳರಂದು ಬಿಡುಗಡೆಗೆ ಸಜ್ಜಾಗಿದೆ.

ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಸಖತ್ ಕ್ರೇಜ್ ಹುಟ್ಟು ಹಾಕಿರೋ ಈ ಚಿತ್ರದ ಸುತ್ತಾ ಪ್ರೇಕ್ಷಕರಲ್ಲಿರೋ ಕ್ಯೂರಿಯಾಸಿಟಿಗಳು ಒಂದೆರಡಲ್ಲ.
ಪ್ರಸಿದ್ಧ ನಿರ್ದೇಶನದ ರತ್ನಮಂಜರಿ ಮರ್ಡರ್ ಮಿಸ್ಟರಿಯ ಸುತ್ತಾ ನಡೆಯೋ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರೋ ಸಿನಿಮಾ ಅನ್ನೋದು ಈಗಾಗಲೇ ಜಾಹೀರಾಗಿದೆ. ಬರೀ ಅಷ್ಟೇ ಅಲ್ಲದೇ ಈ ಸಿನಿಮಾ ಅದರಾಚೆಗೂ ಕೆಲ ನಿಗೂಢಗಳನ್ನು ಹೊಂದಿದೆ ಅನ್ನೋ ಮಾತುಗಳೂ ಕೇಳಿ ಬರುತ್ತಿದೆ. ಆದರೆ ಇದೇ ಹೊತ್ತಲ್ಲಿ ಮತ್ತೊಂದು ಪ್ರಶ್ನೆಯೂ ಪ್ರೇಕ್ಷಕರನ್ನ ಕಾಡುತ್ತಿದೆ. ರತ್ನಮಂಜರಿಯಲ್ಲಿ ಹಾರರ್ ಅಂಶಗಳೂ ಇದ್ದಾವಾ ಎಂಬುದು ಆ ಪ್ರಶ್ನೆಯ ಸಾರಾಂಶ. ಆದರೆ ಈ ಕ್ಷಣದವರೆಗೂ ಚಿತ್ರತಂಡ ಇದನ್ನು ಗೌಪ್ಯವಾಗಿಯೇ ಇಟ್ಟಿದೆ.
ವಿದೇಶದಲ್ಲಿ ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರೋ ಕನ್ನಡಿಗರೇ ಸೇರಿ ರೂಪಿಸಿರುವ ಚಿತ್ರ. ನಟರಾಜ್ ಹಳೆಬೀಡು, ಸಂದೀಪ್ ಕುಮಾರ್, ಡಾ. ನವೀನ್ ಸೇರಿ ನಿರ್ಮಾಣ ಮಾಡಿರೋ ಈ ಚಿತ್ರವನ್ನು ವಿದೇಶ ವಾಸಿಯಾಗಿರೋ ಪ್ರಸಿದ್ಧ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಇರೋ ಎಲ್ಲ ಪ್ರಶ್ನೆಗಳಿಗೂ ಇದೇ ತಿಂಗಳ ಹದಿನೇಳರಂದು ಉತ್ತರ ಸಿಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರತ್ನಮಂಜರಿಯಲ್ಲಿ ಕೊನೇ ಸಲ ಕಾಣಿಸಿಕೊಂಡಿದೆ ತಲಕಾವೇರಿ!

ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರ ಇದೇ ...

news

ರತ್ನಮಂಜರಿ: ಕೊಡಗಿನ ನಿಜವಾದ ಸೌಂದರ್ಯ ಸೆರೆಯಾಗಿದೆ ಇಲ್ಲಿ!

ಪ್ರಸಿದ್ಧ ನಿರ್ದೇಶನದ ರತ್ನಮಂಜರಿ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ ಹದಿನೇಳನೇ ತಾರೀಕಿನಂದು ...

news

ರತ್ನಮಂಜರಿ: ಟೆಂಟ್ ಸಿನಿಮಾದಿಂದ ಬಂದ ನಾಯಕ ನಾಯಕಿ!

ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಹಾಡು, ಟೈಲರ್ ಗಳ ಮೂಲಕ ...

news

ಅಪ್ಪನಾಗಲಿರುವ ಸಲ್ಮಾನ್ ಖಾನ್!

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮದುವೆ ಯಾವಾಗ ಎಂಬ ಪ್ರಶ್ನೆ ಕೇಳಿ ಕೇಳಿ ಬಹುಶಃ ...