ನಾಯಿಗೆ ನೆರವಾದ ನವರಸನಾಯಕ ಜಗ್ಗೇಶ್! ಏನಿದು ಬೌ ಬೌ ಸ್ಟೋರಿ?

ಬೆಂಗಳೂರು, ಬುಧವಾರ, 9 ಜನವರಿ 2019 (10:32 IST)

ಬೆಂಗಳೂರು: ನಾಯಿಯನ್ನೂ ತಮ್ಮ ಮನೆ ಮಗುವಿನಂತೆ ಪ್ರೀತಿಯಿಂದ ಸಾಕುವವರು ಸಾಕಷ್ಟು ಮಂದಿಯಿದ್ದಾರೆ. ಹೀಗೆ ತಮ್ಮ ಮನೆಯ ನಾಯಿ ಕಾಣೆಯಾಗಿದೆಯೆಂದು ಸಾಮಾಜಿಕ ಜಾಲತಾಣದ ಮೂಲಕ ಅಳಲು ತೋಡಿಕೊಂಡವರಿಗೆ ನವರಸನಾಯಕ ಜಗ್ಗೇಶ್ ನೆರವಾಗಿದ್ದು ಹೇಗೆ ಗೊತ್ತಾ?


 
ಗೋಲ್ಡನ್ ರಿಟ್ರೀವರ್ ನಾಯಿಯೊಂದು ಮಲ್ಲೇಶ್ವರದ ನಿವಾಸಿಯೊಬ್ಬರ ಮನೆಯಿಂದ ತಪ್ಪಿಸಿಕೊಂಡಿತ್ತು. ಈ ಬಗ್ಗೆ ನಾಯಿಯ ಮಾಲಿಕರು ಸಾಮಾಜಿಕ ಜಾಲತಾಣದಲ್ಲಿ ನಾಯಿಯ ಫೋಟೋ ಸಮೇತ ಹಾಕಿ ಕಂಡರೆ ಈ ನಂಬರ್ ಗೆ ಕರೆ ಮಾಡಿ ತಿಳಿಸಿ ಎಂದು ಫೋನ್ ನಂಬರ್ ಹಾಕಿದ್ದರು.
 
ಈ ಮಾಲಿಕರ ಮನವಿಗೆ ಸ್ಪಂದಿಸಿದ ಜಗ್ಗೇಶ್ ತಮ್ಮ ಅಭಿಮಾನಿಗಳಿಗೂ ಈ ಫೋಟೋ, ಸುದ್ದಿ ಶೇರ್ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಆ ನಾಯಿ ಇದೀಗ ಪತ್ತೆಯಾಗಿದ್ದು, ರಿಲಯನ್ಸ್ ಮಾರ್ಟ್ ಉದ್ಯೋಗಿಯೊಬ್ಬರಿಗೆ ಸಿಕ್ಕಿ ಸುರಕ್ಷಿತವಾಗಿ ಮನೆ ಸೇರಿದೆಯಂತೆ. ಈ ಬಗ್ಗೆ ಜಗ್ಗೇಶ್ ಟ್ವೀಟ್ ಮಾಡಿದ್ದು, ತಮ್ಮ ಮನವಿಗೆ ಸ್ಪಂದಿಸಿ ಸುದ್ದಿಯನ್ನು ಶೇರ್ ಮಾಡಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಇಂಥಾ ಕೆಲಸ ಮಾಡಿ ನನ್ನ ಕರಿಬೇಡಿ ಎಂದು ರಾಕಿಂಗ್ ಸ್ಟಾರ್ ಯಶ್ ಬೇಸರಿದಂದಲೇ ಹೇಳಿದ್ದೇಕೆ?

ಬೆಂಗಳೂರು: ಬರ್ತ್ ಡೇ ದಿನ ತಮ್ಮನ್ನು ನೋಡಲಾಗಲಿಲ್ಲವೆಂದು ಬೇಸರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ...

news

ರೆಬಲ್ ಸ್ಟಾರ್ ಅಂಬರೀಶ್ ಪುತ್ರನಿಗೆ ನೆರವಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ರನ್ನು ಅಪ್ಪಾಜಿ ಎಂದೇ ಕರೆಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ...

news

ಹೃತಿಕ್ ರೋಷನ್ ತಂದೆ ನಿರ್ಮಾಪಕ ರಾಕೇಶ್ ರೋಷನ್ ಗೆ ಕ್ಯಾನ್ಸರ್!

ಮುಂಬೈ: ಬಾಲಿವುಡ್ ತಾರೆಯರು ಒಬ್ಬರಾದ ಮೇಲೊಬ್ಬರಂತೆ ಕ್ಯಾನ್ಸರ್ ನಂತಹ ಮಹಾಮಾರಿಗೆ ತುತ್ತಾಗುತ್ತಿರುವುದು ...

news

ಡ್ರಾಮಾ ಜ್ಯೂನಿಯರ್ಸ್ ಅಚಿಂತ್ಯ ನೀಡಿದ ಭರ್ಜರಿ ನ್ಯೂಸ್

ಬೆಂಗಳೂರು: ಜೀ ಕನ್ನಡ ಧಾರವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜ್ಯೂನಿಯರ್ಸ್ ವೀಕ್ಷಿಸುತ್ತಿದ್ದವರಿಗೆ ...