Widgets Magazine

ಸರಿಗಮಪ ಅಂಧ ಗಾಯಕಿಯರಿಗೆ ಕೊಟ್ಟ ಮಾತು ಉಳಿಸಿಕೊಂಡ ಜಗ್ಗೇಶ್

ಬೆಂಗಳೂರು| Krishnaveni K| Last Modified ಗುರುವಾರ, 13 ಫೆಬ್ರವರಿ 2020 (11:08 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋಗೆ ಹಾಡಲು ಬಂದ ತುಮಕೂರಿನ ಇಬ್ಬರು ಅಂಧ ಅವಳಿ ಸಹೋದರಿಯರಾದ ರತ್ನಮ್ಮ ಮತ್ತು ಮಂಜಮ್ಮ ಕಷ್ಟಕ್ಕೆ ನೆರವಾಗುವೆ ಎಂದಿದ್ದ ಜಗ್ಗೇಶ್ ಅದನ್ನು ಒಂದೇ ದಿನದಲ್ಲಿ ಸಾಬೀತು ಮಾಡಿ ತೋರಿಸಿದ್ದಾರೆ.

 
ಅವಳಿ ಸಹೋದರಿಯರಿಗೆ ಮನೆ ರಿಪೇರಿ ಮಾಡಿಸಿಕೊಡುವುದಾಗಿ ಜಗ್ಗೇಶ್ ಹೇಳಿಕೊಂಡಿದ್ದರು. ಅಲ್ಲದೆ, ಇದನ್ನು ತಮ್ಮ ಅಭಿಮಾನಿ ಸಂಘದ ಮೂಲಕ ಮಾಡಿಸಿಕೊಡುತ್ತಿರುವುದಾಗಿ ಹೇಳಿಕೊಂಡಿದ್ದರು.
 
ಬರೀ ಇದು ಬಾಯಿ ಮಾತಿನ ಹೇಳಿಕೆಯಾಗಿರದೇ ಒಂದೇ ದಿನದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಜಗ್ಗೇಶ್. ನಿನ್ನೆಯಿಂದಲೇ ಅಂಧ ಸಹೋದರಿಯರ ಮನೆಯ ಛಾವಣಿ ರಿಪೇರಿ ಕೆಲಸ ಆರಂಭವಾಗಿದೆ. ಈ ಮೂಲಕ ಕೊಟ್ಟ ಮಾತನ್ನು ಜಗ್ಗೇಶ್ ತಪ್ಪದೇ ಉಳಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :