ಇವರೆಲ್ಲಾ ಕೊರೋನಾ ಕ್ಯಾರಿಯರ್ಸ್: ಜಗ್ಗೇಶ್ ಆಕ್ರೋಶ

ಬೆಂಗಳೂರು| Krishnaveni K| Last Modified ಭಾನುವಾರ, 2 ಮೇ 2021 (09:34 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಮಾಸ್ಕ್ ಹಾಕದೇ ಓಡಾಡುವವರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

 
ಟ್ವಿಟರ್ ಮೂಲಕ ಅಭಿಮಾನಿಯೊಬ್ಬರು ಫೋಟೋ ಪ್ರಕಟಿಸಿ ನೋಡಿ ಸರ್, ಇಲ್ಲಿ ಯಾರೂ ಮುಖಗವಸು ಹಾಕಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ಇಂತಹವರೆಲ್ಲಾ ಕೊರೋನಾ ಕ್ಯಾರಿಯರ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
‘ಇಂಥಾ ಗುಣದವರೆ ಕೊರೋನಾ ಕ್ಯಾರಿಯರ್ಸ್. ಕೊರೋನಾ ಬಂದಿದ್ದು ತಿಳಿದಿದ್ದರು ಮಾಸ್ಕ್ ಹಾಕದೇ ನನ್ನ ಸ್ನೇಹಿತನ ಮನೆಗೆ ಕಾಗೆಗಳಂತೆ ಹೊಕ್ಕು ಕೊರೋನಾ ಪ್ರೆಸೆಂಟೇಷನ್ ಕೊಟ್ಟು ಅವರ ತಂದೆ-ತಾಯಿ, 20 ವರ್ಷದ ತಮ್ಮನನ್ನು ಬಲಿಪಡೆದರು. ನನ್ನ ಹುಡುಗ ಸಾವು ಬದುಕಿನ ನಡುವೆ ನರಳಾಡುತ್ತಾ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾನೆ. ಯಾರೇ ಇರಲಿ, ಅಂತರ, ಮಾಸ್ಕ್ ಬಳಸಿ, ಪ್ಲೀಸ್’ ಎಂದು ಜಗ್ಗೇಶ್ ಮನವಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :