ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರಾ ಈ ಸೆಲೆಬ್ರಿಟಿಗಳು?!

ಬೆಂಗಳೂರು| Krishnaveni K| Last Modified ಬುಧವಾರ, 18 ಸೆಪ್ಟಂಬರ್ 2019 (11:04 IST)
ಬೆಂಗಳೂರು: ವಾಹಿನಿಯಲ್ಲಿ ಪ್ರಸಾರವಾಗಲಿರುವ ಕಿಚ್ಚ ಸುದೀಪ್ ನಿರೂಪಿಸುವ ಜನಪ್ರಿಯ ರಿಯಾಲಿಟಿ ಶೋ ಸೀಸನ್ 7 ಗೆ ಇನ್ನು ಕೆಲವೇ ದಿನಗಳು ಬಾಕಿಯಿದೆ.

 
ಈಗಾಗಲೇ ಪ್ರೋಮೋಗಳು ಪ್ರಸಾರವಾಗುತ್ತಿದ್ದು, ಅಕ್ಟೋಬರ್ ನಲ್ಲಿ ಬಿಗ್ ಬಾಸ್ ಶುರುವಾಗುತ್ತಿರುವುದಾಗಿ ಸ್ವತಃ ಕಿಚ್ಚ ಸುದೀಪ್ ಸುಳಿವು ನೀಡಿದ್ದಾರೆ. ಈಗಾಗಲೇ ಬಿಗ್ ಬಾಸ್ ಗೆ ಸ್ಪರ್ಧಿಗಳ ಪಟ್ಟಿ ತಯಾರಿಸಲಾಗುತ್ತಿದೆಯಂತೆ.
 
ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಸೆಲೆಬ್ರಿಟಿಗಳು ಇರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಮೂಲಗಳ ಪ್ರಕಾರ ಮನೆದೇವ್ರು ದಾರವಾಹಿ ಖ್ಯಾತಿಯ ಜಯ್ ಡಿಸೋಜಾ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಸದ್ಯಕ್ಕೆ ತೆಲುಗಿನ ಎರಡು ಧಾರವಾಹಿಗಳಲ್ಲಿ ಬ್ಯುಸಿಯಾಗಿರುವ ಜಯ್ ಆ ಧಾರವಾಹಿ ತಂಡ ಅನುಮತಿ ಕೊಟ್ಟರೆ ಬಿಗ್ ಬಾಸ್ ಗೆ ಎಂಟ್ರಿಯಾಗಲು ತಯಾರಾಗಿದ್ದಾರೆ. ಮತ್ತೊಂದೆಡೆ ಇದೀಗ ಮದುವೆಯಾಗಿ ಚಿತ್ರರಂಗದಿಂದ ದೂರವಿರುವ ನಟಿ ಅಮೂಲ್ಯ ಹೆಸರೂ ಕೇಳಿಬರುತ್ತಿದೆ. ಆದರೆ ಬಿಗ್ ಬಾಸ್ ತನ್ನ ಸ್ಪರ್ಧಿಗಳ ಗುಟ್ಟನ್ನು ಅಂತಿಮ ಕ್ಷಣದಲ್ಲೇ ಬಹಿರಂಗಗೊಳಿಸುತ್ತದೆ. ಅಲ್ಲಿಯವರೆಗೆ ಊಹೆ ಮಾಡುತ್ತಾ ಕೂರಬಹುದಷ್ಟೇ.
ಇದರಲ್ಲಿ ಇನ್ನಷ್ಟು ಓದಿ :