Widgets Magazine

ರಾವಣ ಪಾತ್ರಕ್ಕೆ ಕತ್ತರಿ: ನಟ ಜೆಕೆ ಬಹಿರಂಗ ಅಸಮಾಧಾನ

ಬೆಂಗಳೂರು| Krishnaveni K| Last Modified ಶನಿವಾರ, 17 ಅಕ್ಟೋಬರ್ 2020 (09:20 IST)
ಬೆಂಗಳೂರು: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಿಯಾ ಕೆ ರಾಮ್ ಹಿಂದ ಧಾರವಾಹಿ ಕನ್ನಡ ಅವತರಣಿಕೆ ಸೀತೆಯ ರಾಮ ಧಾರವಾಹಿಯಲ್ಲಿ ರಾವಣನ ಪಾತ್ರಕ್ಕೆ ಕತ್ತರಿ ಹಾಕಿರುವುದು ನಟ ಜೆಕೆ ಬೇಸರಕ್ಕೆ ಕಾರಣವಾಗಿದೆ.
 

ಹಿಂದಿಯಲ್ಲಿ ಪಾತ್ರ ಮಾಡಿದ್ದ ಜೆಕೆಗೆ ಕನ್ನಡದಲ್ಲಿ ಅದೇ ಧಾರವಾಹಿಯ ಡಬ್ಬಿಂಗ್ ಅವತರಣಿಕೆಯಲ್ಲಿ ಕತ್ತರಿ ಪ್ರಯೋಗ ಮಾಡಿರುವುದು ಬೇಸರಕ್ಕೆ ಕಾರಣವಾಗಿದೆ. ತಮಿಳು, ಒಡಿಯಾ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲೂ ರಾವಣ ಪಾತ್ರವನ್ನು ಯಾವುದೇ ಎಡಿಂಗ್ ಮಾಡದೇ ಇದ್ದ ಹಾಗೆಯೇ ತೋರಿಸಲಾಗಿದೆ. ಆದರೆ ಕನ್ನಡಿಗನಾಗಿ ಕನ್ನಡದಲ್ಲೇ ತಮ್ಮ ಪಾತ್ರವನ್ನು ಕಟ್ ಮಾಡಿರುವುದು ಯಾಕೆ? ಕನ್ನಡ ಭಾಷಾಭಿಮಾನದ ಬಗ್ಗೆ ಎಲ್ಲರೂ ಭಾಷಣ ಮಾಡುತ್ತಾರೆ. ಆದರೆ ಕನ್ನಡಿಗ ಬೇರೆ ಭಾಷೆಯಲ್ಲಿ ಮಿಂಚಿದರೂ ನಮ್ಮ ಕನ್ನಡದಲ್ಲೇ ಪ್ರೋತ್ಸಾಹ ಕೊಡಲ್ಲ ಎಂದು ಜೆಕೆ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ. ಅಲ್ಲದೆ,  ‘ಅವರ ಕಂಡ್ರೆ ಇವರಿಗೆ ಆಗಲ್ಲ, ಇವರನ್ ಕಂಡ್ರೆ ಅವರಿಗೆ ಆಗಲ್ಲ, ಒಟ್ನಲ್ಲಿ ನೀವು ಯಾರೂ ಉದ್ದಾರ ಆಗಲ್ಲ. ಕನ್ನಡ ಬೆಳೆಸಿ, ಕನ್ನಡ ಉಳಿಸಿ ಅಂತಾರೆ, ಆದರೆ ರಿಯಲ್ ಕನ್ನಡಿಗನ ಇಲ್ಲಿ ತುಳಿತಾರೆ’ ಎಂದು ಬೇಸರದಿಂದಲೇ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :