ತಂದೆಯ ಫೋಟೋ ಜೊತೆ ಮಾತನಾಡಿದ ಜ್ಯೂನಿಯರ್ ಚಿರು

ಬೆಂಗಳೂರು| Krishnaveni K| Last Modified ಸೋಮವಾರ, 3 ಮೇ 2021 (09:29 IST)
ಬೆಂಗಳೂರು: ನಟಿ ಮೇಘನಾ ರಾಜ್ ತಮ್ಮ ಮಗ ಜ್ಯೂನಿಯರ್ ಚಿರುವಿನ ಮುದ್ದಾದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
 

ಚಿರಂಜೀವಿ ಸರ್ಜಾ ಮಗುವಿನ ಮುಖವನ್ನು ನೋಡುವ ಮೊದಲೇ ಇಹಲೋಕ ತ್ಯಜಿಸಿದ್ದರು. ಆದರೇನಂತೆ ಮೇಘನಾ ತನ್ನ ಮಗ ತಂದೆಯ ನೆನಪು ಇಟ್ಟುಕೊಳ್ಳುವಂತೆ ಮಾಡುತ್ತಿದ್ದಾರೆ.
 
ತಮ್ಮ ಮನೆಯಲ್ಲಿರುವ ಚಿರು ಸರ್ಜಾರ ಆಳೆತ್ತರದ ಫೋಟೋ ಮುಂದೆ ನಿಂತು ಮಗನಿಗೆ ‘ಅಪ್ಪ ಎಲ್ಲಿ..’ ಎಂದು ತೋರಿಸಿಕೊಡುತ್ತಾರೆ. ಇದಕ್ಕೆ ಜ್ಯೂನಿಯರ್ ಚಿರು ಕೂಡಾ ನಗುತ್ತಾ ಫೋಟೋ ಮೇಲೆ ತಟ್ಟಿ ತನ್ನ ತಂದೆಯನ್ನು ಗುರುತಿಸುತ್ತಿದ್ದಾನೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :