Widgets Magazine

ಬಿಡುಗಡೆಗೂ ಮೊದಲು ತೆಲುಗಿನಲ್ಲಿ ಕೆಜಿಎಫ್ 2 ಎಷ್ಟು ಹಣ ಕೊಳ್ಳೆ ಹೊಡೆಯುತ್ತಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 13 ಫೆಬ್ರವರಿ 2020 (09:30 IST)
ಬೆಂಗಳೂರು: ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಆದರೆ ಈಗಾಗಲೇ ಈ ಸಿನಿಮಾ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಬಾರೀ ಬೇಡಿಕೆಯಿದೆ.

 
ಕೆಜಿಎಫ್ 1 ರ ನಂತರ ಆಂಧ‍್ರದಲ್ಲೂ ರಾಕಿಂಗ್ ಸ್ಟಾರ್ ಯಶ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಕೆಜಿಎಫ್ 2 ಸಿನಿಮಾ ಬಿಡುಗಡೆಗಾಗಿ ಅಲ್ಲೂ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
 
ಮೂಲಗಳ ಪ್ರಕಾರ ಕೆಜಿಎಫ್ 2 ನ ತೆಲುಗು ವರ್ಷನ್ ಹಕ್ಕು ಬರೋಬ್ಬರಿ 30 ಅಥವಾ 40 ಕೋಟಿ ರೂ.ಗೆ ಸೇಲ್ ಆಗುತ್ತಿದೆಯಂತೆ. ಅಂದರೆ ಇದು ಕನ್ನಡ ಸಿನಿಮಾ ಪೈಕಿ ಭಾರೀ ದಾಖಲೆಯಾಗಲಿದೆ. ಇದುವರೆಗೆ ಯಾವ ಕನ್ನಡ ಸಿನಿಮಾವೂ ಇಷ್ಟು ದುಬಾರಿ ಮೊತ್ತಕ್ಕೆ ಬೇರೆ ಭಾಷೆಗೆ ಮಾರಾಟವಾಗಿರಲಿಲ್ಲ. ಈ ಮೂಲಕ ಕೆಜಿಎಫ್ 2 ಬಿಡುಗಡೆಗೂ ಮೊದಲೇ ಭಾರೀ ಹವಾ ಸೃಷ್ಟಿಸಿದೆ ಎನ್ನಬಹುದು.
ಇದರಲ್ಲಿ ಇನ್ನಷ್ಟು ಓದಿ :