ಹಳೆಯ ಕನ್ನಡ ಶಾಲೆ ದತ್ತು ಪಡೆದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಶುಕ್ರವಾರ, 30 ಜುಲೈ 2021 (10:20 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಲವು ಶಾಲೆಗಳನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದೀಗ ಮತ್ತೊಂದು ಶಾಲೆಯನ್ನು ದತ್ತು ಪಡೆದಿದ್ದಾರೆ.

 
ಈ ಬಾರಿ ಸುದೀಪ್ 133 ವರ್ಷ ಹಳೆಯ ಕನ್ನಡ ಶಾಲೆಯೊಂದನ್ನು ದತ್ತು ಪಡೆದಿರುವ ಸುದ್ದಿ ಬಂದಿದೆ. ಶಿವಮೊಗ್ಗದ ಬಿಎಚ್ ರಸ್ತೆಯಲ್ಲಿರುವ ಶತಮಾನಗಳಷ್ಟು ಹಳೆಯ ಸರ್ಕಾರಿ ಕನ್ನಡ ಶಾಲೆಯನ್ನು ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ದತ್ತು ಪಡೆದಿದ್ದಾರೆ.
 
ಕಿಚ್ಚನ ಟೀಂ ಈಗ ಶಾಲೆಗೆ ಹೊಸ ರೂಪ ನೀಡಲಿದೆ. ಇದಕ್ಕೂ ಮೊದಲು ಹಲವು ಶಾಲೆಗಳನ್ನು ಕಿಚ್ಚನ ಟೀಂ ದತ್ತು ಪಡೆದುಕೊಂಡು ಇತರರಿಗೆ ಮಾದರಿಯಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :