ಗರುಡಗಮನನಿಗೆ ಕಿಚ್ಚ ಸುದೀಪ್ ಸಾಥ್

ಬೆಂಗಳೂರು| Krishnaveni K| Last Modified ಶನಿವಾರ, 20 ನವೆಂಬರ್ 2021 (10:47 IST)
ಬೆಂಗಳೂರು: ರಾಜ್ ಶೆಟ್ಟಿ-ರಿಷಬ್ ಶೆಟ್ಟಿ ಜೊತೆಯಾಗಿ ನಟಿಸಿರುವ ಸಿನಿಮಾ ನಿನ್ನೆ ತೆರೆ ಕಂಡಿದೆ.

ಈ ಸಿನಿಮಾ ಬಗ್ಗೆ ಇದೀಗ ಕಿಚ್ಚ ಸುದೀಪ್ ಮೆಚ್ಚುಗೆಯ ಮಾತನಾಡಿದ್ದಾರೆ. ಪುನೀತ್ ಸಾವಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಅಪರೂಪವಾಗಿರುವ ಸುದೀಪ್ ಈಗ ಗರುಡಗಮನ ಸಿನಿಮಾ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.


ಸಿನಿಮಾ ಬಗ್ಗೆ ಉತ್ತಮ ವಿಮರ್ಶೆಗಳು ಕೇಳಿಬರುತ್ತಿವೆ. ಇಡೀ ಗರುಡಗಮನ ಚಿತ್ರಕ್ಕೆ ಶುಭ ಹಾರೈಕೆಗಳು ಎಂದಿದ್ದಾರೆ. ಹೊಸಬರ ಪ್ರಯತ್ನಗಳಿಗೆ ಕಿಚ್ಚ ಯಾವತ್ತೂ ಬೆನ್ನು ತಟ್ಟದೇ ಇರುವುದಿಲ್ಲ. ಇದೀಗ ರಾಜ್ ಬಿ ಶೆಟ್ಟಿ ನಿರ್ದೇಶನ ಸಿನಿಮಾಗೂ ಮೆಚ್ಚುಗೆಯ ಮಾತನಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :