ಅಜ್ಜಿ ಮಾಡಿದ ಕೆಲಸ ನೋಡಿ ಕಣ್ಣೀರು ಹಾಕಿದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Updated: ಮಂಗಳವಾರ, 14 ಜುಲೈ 2020 (09:17 IST)
ಬೆಂಗಳೂರು: ಅಭಿಮಾನಿಗಳೊಂದಿಗೆ ಕಿಚ್ಚ ಸುದೀಪ್ ಇತ್ತೀಚೆಗೆ ಆನ್ ಲೈನ್ ಸಂವಾದ ನಡೆಸುವ ಮೂಲಕ ಅವರ ಜತೆ ನಾನಿದ್ದೇನೆ ಎಂಬ ಭರವಸೆ ತುಂಬುತ್ತಿದ್ದಾರೆ.
 > ಆದರೆ ಅಂತಹದ್ದೇ ಸಂವಾದದ ವೇಳೆ ಕಿಚ್ಚ ಸುದೀಪ್  ಕಣ್ಣೀರು ಹಾಕಿದ ಘಟನೆ ನಡೆದಿದೆ. ಇದಕ್ಕೆ ಕಾರಣ ಅಭಿಮಾನಿ ಅಜ್ಜಿಯೊಬ್ಬರು ಮಾಡಿದ ಕೆಲಸ!>   ವಿಡಿಯೋ ಸಂವಾದದಲ್ಲಿ ‘ಪದ್ದಮ್ಮ’ ಎಂಬ ಹಿರಿಯ ವಯಸ್ಸಿನವರೊಬ್ಬರು ಕಿಚ್ಚ ಸುದೀಪ್ ಗೆ ಆರತಿ ಎತ್ತಿ ದೃಷ್ಟಿ ನಿವಾಳಿಸಿದರು. ಇದನ್ನು ನೋಡುತ್ತಿದ್ದರೆ ಕಿಚ್ಚ ಸುದೀಪ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಕೆಲ ಹೊತ್ತು ಮಾತೇ ಹೊರಡದೇ ಅಜ್ಜಿಯ ಅಭಿಮಾನಕ್ಕೆ ತಲೆ ಬಾಗಿ ಕುಳಿತರು.ಇದರಲ್ಲಿ ಇನ್ನಷ್ಟು ಓದಿ :