ಮೊನ್ನೆ ಡಿ ಬಾಸ್ ದರ್ಶನ್, ನಿನ್ನೆ ಕಿಚ್ಚ ಸುದೀಪ್! ಏನಿದು ಮ್ಯಾಜಿಕ್?!

ಬೆಂಗಳೂರು, ಬುಧವಾರ, 17 ಜುಲೈ 2019 (09:30 IST)

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಸಿನಿಮಾ ಬಿಡುಗಡೆಗಿಂತ ಮುಂಚೆ ಆ ಸಿನಿಮಾದ ಹಾಡು ಬಿಡುಗಡೆಯಾಗಿ ಅದು ಭರ್ಜರಿ ಲೈಕ್ಸ್ ಪಡೆಯುವ ಟ್ರೆಂಡ್ ಶುರುವಾಗಿದೆ.


 
ಮೊನ್ನೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮೇಘನಾ ಸರ್ಜಾ ಅಭಿನಯದ ಕುರುಕ್ಷೇತ್ರ ಸಿನಿಮಾದ ಚಾರುತಂತಿ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿ ಲಕ್ಷಗಟ್ಟಲೆ ವ್ಯೂ ಪಡೆದು ಸುದ್ದಿಯಾಗಿತ್ತು. ಆ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷ ವ್ಯೂ ಪಡೆದು ಭಾರೀ ಹಿಟ್ ಆಗಿದೆ.
 
ಇದೀಗ ಅದೇ ಮೋಡಿಯನ್ನು ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಹಾಡು ಮಾಡಿದೆ. ನಿನ್ನೆ ಸಂಜೆ ಪೈಲ್ವಾನ್ ಸಿನಿಮಾದ ಕಣ್ಮಣಿಯೇ ಕಣ್ಣು ಹೊಡಿಯೇ... ಎಂದು ರೊಮ್ಯಾಂಟಿಕ್ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ನಿಮಿಷಗಳೊಳಗೆ ಇದೂ ಲಕ್ಷ ವ್ಯೂ ಪಡೆದಿದೆ. ಸಂಚಿತ್ ಹೆಗ್ಡೆ ಹಾಡಿರುವ ರೊಮ್ಯಾಂಟಿಕ್ ನಂಬರ್ ಅತ್ತ ಪಡ್ಡೆ ಹುಡುಗರಿಗೂ ಇಷ್ಟವಾಗುವಂತಿದೆ. ಹೀಗಾಗಿ ಈ ಹಾಡೂ ಈಗ ಹಿಟ್ ಲಿಸ್ಟ್ ಸೇರ್ಪಡೆಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಸಾವಿನ ವದಂತಿ! ಸುಳ್ಳು ಸುದ್ದಿಗೆ ಏನಂದ್ರು ದ್ವಾರಕೀಶ್?

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳ ಬಗ್ಗೆ ಸುಳ್ಳು ಸುದ್ದಿ ...

news

ಈ ವಾರ ಒಂದೇ ದಿನ ಸ್ಯಾಂಡಲ್ ವುಡ್ ನ ಎರಡು ಬಹುನಿರೀಕ್ಷೆಯ ಚಿತ್ರಗಳು ತೆರೆಗೆ

ಬೆಂಗಳೂರು: ಈ ವಾರಂತ್ಯದಲ್ಲಿ ಕನ್ನಡ ಸಿನಿ ರಸಿಕರಿಗೆ ಎರಡು ರಸಗವಳ ಸಿಗಲಿದೆ. ಒಂದೇ ದಿನ ಎರಡು ...

news

ಕಿರುತೆರೆಯ ಈ ಸೂಪರ್ ಹಿಟ್ ಧಾರವಾಹಿಗೆ ಎಂಟ್ರಿ ಕೊಟ್ಟ ನಟಿ ಶ್ರುತಿ

ಬೆಂಗಳೂರು: ಇತ್ತೀಚೆಗೆ ಹಿರಿಯ ಸಿನಿ ಕಲಾವಿದರು ಕಿರುತೆರೆಯತ್ತ ಮುಖ ಮಾಡುವುದು ಹೊಸದೇನಲ್ಲ. ಹಿರಿಯ ನಟಿಯರು ...

news

ಗೆಳೆಯರೊಂದಿಗೆ ಕಾಡುಮೇಡು ಅಲೆಯುತ್ತಿರುವ ರಿಷಬ್ ಶೆಟ್ಟಿ! ಕಾರಣವೇನು ಗೊತ್ತಾ?

ಬೆಂಗಳೂರು: ರಿಷಬ್ ಶೆಟ್ಟಿ ಸಿನಿಮಾ ಕೆಲಸಗಳಲ್ಲಿ ಎಷ್ಟು ಅಚ್ಚುಕಟ್ಟಾಗಿ ತೊಡಗಿಕೊಳ್ಳುತ್ತಾರೆ ಎಂದು ...