Widgets Magazine

ಪೈಲ್ವಾನ್ ಸಿನಿಮಾ 100 ಕೋಟಿ ಕ್ಲಬ್ ಸೇರಿದ್ರೂ ಅಧಿಕೃತವಾಗಿ ಕಿಚ್ಚ ಸುದೀಪ್ ಟ್ವೀಟ್ ಮಾಡಿಲ್ಲ ಯಾಕೆ?

ಬೆಂಗಳೂರು| Krishnaveni K| Last Modified ಶುಕ್ರವಾರ, 20 ಸೆಪ್ಟಂಬರ್ 2019 (09:04 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಿ 100 ಕೋಟಿ ಕ್ಲಬ್ ಸೇರಿದೆ ಎಂಬ ಸುದ್ದಿ ಬರುತ್ತಿದೆ.

 
ಆದರೆ ಚಿತ್ರ ನೂರು ಕೋಟಿ ಕ್ಲಬ್ ಸೇರಿರುವುದರ ಬಗ್ಗೆ ನೇರವಾಗಿ ಕಿಚ್ಚ ಸುದೀಪ್ ಯಾವುದೇ ಟ್ವೀಟ್ ಮಾಡದಿದ್ದರೂ ಖಾಸಗಿ ಸುದ್ದಿವಾಹಿನಿಯ ಸುದ್ದಿಯೊಂದನ್ನು ರಿಟ್ವೀಟ್ ಮಾಡುವುದರ ಮೂಲಕ 100 ಕೋಟಿ ಸೇರಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.
 
ಆದರೆ ಸುದೀಪ್ ಈ ರೀತಿ ತಾವೇ ಟ್ವೀಟ್ ಮಾಡಿ ಬೇರೆ ಸುದ್ದಿ ಮೂಲದ ಟ್ವೀಟ್ ನ್ನು ರಿಟ್ವೀಟ್ ಮಾಡಿದ್ದಕ್ಕೆ ಅಭಿಮಾನಿಗಳಲ್ಲೇ ಚರ್ಚೆ ಶುರುವಾಗಿದೆ. 100 ಕೋಟಿ ಕ್ಲಬ್ ಸೇರಿದ್ದರೆ ನೀವೇ ಖುಷಿ ವಿಚಾರವನ್ನು ಹಂಚಿಕೊಳ್ಳಬಹುದಲ್ಲವೇ? ಯಾಕೆ ರಿಟ್ವೀಟ್ ಮಾಡಿದ್ದೀರಿ ಎಂದು ಕೆಲವರು ಕಾಲೆಳೆದಿದ್ದರೆ, ಇದಕ್ಕೆ ಕಿಚ್ಚನ ಖಾಸಾ ಅಭಿಮಾನಿಗಳು ಯಾವ ನಟರೂ 100 ಕೋಟಿ ಕ್ಲಬ್ ಸೇರಿರುವುದರ ಬಗ್ಗೆ ಅಧಿಕೃತ ಟ್ವೀಟ್ ಮಾಡಿಲ್ಲ. ಕಿಚ್ಚನೂ ಅದನ್ನೇ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :