ಹಿರಿಯ ನಿರ್ದೇಶಕ ಎ.ಟಿ ರಘು ಸಹಾಯಕ್ಕೆ ಧಾವಿಸಿದ ಕಿಚ್ಚ ಸುದೀಪ್

ಬೆಂಗಳೂರು| Krishnaveni K| Last Modified ಮಂಗಳವಾರ, 12 ಜನವರಿ 2021 (10:59 IST)
ಬೆಂಗಳೂರು: ಕಿಚ್ಚ ಸುದೀಪ್ ಸದ್ದಿಲ್ಲದೇ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುತ್ತಾರೆ. ಇದೀಗ ಅನಾರೋಗ್ಯ ಪೀಡಿತರಾಗಿರುವ ಹಿರಿಯ ನಿರ್ದೇಶಕ ಎ.ಟಿ. ರಘು ಅವರ ಸಹಾಯಕ್ಕೆ ಕಿಚ್ಚ ಧಾವಿಸಿದ್ದಾರೆ.

 
ಕಿಡ್ನಿ ವೈಫಲ್ಯಕ್ಕೊಳಗಾಗಿರುವ ಎ.ಟಿ. ರಘು ಅವರು ಈಗ ಆರ್ಥಿಕವಾಗಿ ದುರ್ಬಲವಾಗಿದ್ದಾರೆ. ಅವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಎದ್ದು ಓಡಾಡುವುದೂ ಕಷ್ಟ. ಹೀಗಿರುವ ಅವರಿಗೆ ಈಗ ಕಿಚ್ಚ ಸುದೀಪ್ ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ಸಹಾಯಕ್ಕೆ ನಾನಿದ್ದೇನೆ ಎಂದು ಭರವಸೆ ತುಂಬಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ಗೆ 20 ಸಿನಿಮಾ ನಿರ್ದೇಶನ ಮಾಡಿದ್ದ ರಘು ಸುದೀಪ್ ಜೊತೆ ಮಾತನಾಡುವಾಗ ‘ಅಂಬರೀಶ್ ಹೋದ ಮೇಲೆ ನನಗೆ ಸಹಾಯ ಮಾಡುವವರೇ ಇರಲಿಲ್ಲ. ಈಗ ನಿಮ್ಮಲ್ಲಿ ಅವರನ್ನು ಕಾಣುತ್ತೇನೆ’ ಎಂದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :