ಗುಣಮುಖರಾದ ಕಿಚ್ಚ ಸುದೀಪ್: ಈ ವಾರ ಬಿಗ್ ಬಾಸ್ ನಲ್ಲಿ ಭಾಗಿ

ಬೆಂಗಳೂರು| Krishnaveni K| Last Modified ಶುಕ್ರವಾರ, 30 ಏಪ್ರಿಲ್ 2021 (09:42 IST)
ಬೆಂಗಳೂರು: ಅನಾರೋಗ್ಯದಿಂದ ಗುಣಮುಖರಾಗಿರುವ ಸಂತಸದ ಸುದ್ದಿಯನ್ನು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
 > ಹೀಗಾಗಿ ಈ ವಾರ ಅವರು ಬಿಗ್ ಬಾಸ್ ನಲ್ಲಿ ಭಾಗವಹಿಸುವುದು ಖಚಿತವಾಗಿದೆ. ತಮಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರಿಗೂ ಅವರು ಧನ್ಯವಾದ ಸಲ್ಲಿಸಿದ್ದಾರೆ.>   ‘ನಿಮ್ಮೆಲ್ಲರ ಹಾರೈಕೆಗೆ ಧನ್ಯವಾದಗಳು. ನಾನೀಗ ಗುಣಮುಖನಾಗುತ್ತಿದ್ದು, ಈ ವಾರ ಬಿಗ್ ಬಾಸ್ ನಲ್ಲಿ ಪಾಲ್ಗೊಳ್ಳುವುದನ್ನು ಎದಿರುನೋಡುತ್ತಿದ್ದೇನೆ. ನನ್ನ ಬಗ್ಗೆ ಕಾಳಜಿ ವಹಿಸಿದ ಡಾ. ವಿನಯ್ ಹಾಗೂ ಡಾ. ವೆಂಕಟೇಶ್ ಗೆ ಧನ್ಯವಾದಗಳು. ನನ್ನ ಆರೋಗ್ಯಕ್ಕಾಗಿ ಹಲವರು ದೇವಾಲಯದಲ್ಲಿ ಪೂಜೆ ಸಲ್ಲಿಸಿರುವುದನ್ನು ನೋಡಿದ್ದೇನೆ. ನಿಮಗೆಲ್ಲರಿಗೂ ನನ್ನ ಪ್ರೀತಿಯಷ್ಟೇ ತಿಳಿಸಲು ಸಾಧ್ಯ’ ಎಂದು ಸುದೀಪ್ ಹೇಳಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :