ಕೊರೊನಾ ಸೋಂಕಿಗೆ ಒಳಗಾದ ಖ್ಯಾತ ಚಿತ್ರಕಥೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್

ಹೈದರಾಬಾದ್| pavithra| Last Updated: ಗುರುವಾರ, 8 ಏಪ್ರಿಲ್ 2021 (11:25 IST)
ಹೈದರಾಬಾದ್ : ರಾಜಮೌಳಿ ‘ಆರ್ ಆರ್ ಆರ್’ ಚಿತ್ರದ ಕಥೆ ಬರೆದ ಖ್ಯಾತ ಚಿತ್ರಕಥೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರು ಕೋರೊನಾ ಸೋಕಿಗೆ ಒಳಗಾಗಿದ್ದಾರೆ.

ಇತ್ತೀಚೆಗೆ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರ ಪುತ್ರ ರಾಜಮೌಳಿ ಅವರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಹಾಗೇ ಅವರ ಚಿತ್ರತಂಡದ ಕೆಲವರಿಗೆ ಸೋಂಕು ತಗುಲಿತ್ತು. ಈ ಹಿನ್ನಲೆಯಲ್ಲಿ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರು ಕೂಡ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ. ಆ ವೇಳೆ ಅವರಿಗೆ ಪಾಸಿಟಿವ್ ಬಂದಿದೆ.

ಇದೀಗ ಅವರು ಹೋಮ್ ಕ್ವಾರಂಟೈನ್ ಆಗಿದ್ದು,  ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ  ಎಂಬುದಾಗಿ ತಿಳಿದುಬಂದಿದೆ.ಇದರಲ್ಲಿ ಇನ್ನಷ್ಟು ಓದಿ :