ತೆಲುಗಿನ ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಡಿಯೋ ಹಕ್ಕು ಕನ್ನಡದ ಲಹರಿ ಸಂಸ್ಥೆ ತೆಕ್ಕೆಗೆ

ಹೈದರಾಬಾದ್| Krishnaveni K| Last Modified ಶನಿವಾರ, 14 ಸೆಪ್ಟಂಬರ್ 2019 (13:19 IST)
ಹೈದರಾಬಾದ್: ತೆಲುಗಿನ ಭಾರೀ ನಿರೀಕ್ಷೆ ಹುಟ್ಟಿಸಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾ ಅಡಿಯೋ ಹಕ್ಕನ್ನು ಕನ್ನಡದ ಲಹರಿ ಸಂಸ್ಥೆ ಖರೀದಿಸಿದೆ.

 
ತೆಲುಗು ಮಾತ್ರವಲ್ಲದೆ ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಮೆಗಾಸ್ಟಾರ್ ಚಿರಂಜೀವಿ ನರಸಿಂಹ ರೆಡ್ಡಿಯಾಗಿ ಪ್ರಮುಖ ಪಾತ್ರ ಮಾಡುತ್ತಿದ್ದರೆ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಕನ್ನಡ ನಟ ಕಿಚ್ಚ ಸುದೀಪ್ ಕೂಡಾ ಈ ಐತಿಹಾಸಿಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
 
ಇದರ  ಅಡಿಯೋ ಹಕ್ಕನ್ನು ಖರೀದಿಸಿರುವ ಲಹರಿ ಸಂಸ್ಥೆ ಸದ್ಯದಲ್ಲೇ  ಅದ್ಧೂರಿಯಾಗಿ ಅಡಿಯೋ ಬಿಡುಗಡೆ ಸಮಾರಂಭ ಆಯೋಜಿಸುವುದಾಗಿ ಘೋಷಿಸಿದೆ.
ಇದರಲ್ಲಿ ಇನ್ನಷ್ಟು ಓದಿ :