ರಸ್ತೆ ಅಪಘಾತದಲ್ಲಿ ರಿಯಾಲಿಟಿ ಶೋ ಸ್ಟಾರ್ ಸಮನ್ವಿ ದುರ್ಮರಣ

ಬೆಂಗಳೂರು| Krishnaveni K| Last Modified ಶುಕ್ರವಾರ, 14 ಜನವರಿ 2022 (08:29 IST)
ಬೆಂಗಳೂರು: ನಿನ್ನೆ ಕೋಣನ ಕುಂಟೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ 6 ವರ್ಷದ ಸಮನ್ವಿ ಸಾವನ್ನಪ್ಪಿದ್ದು, ತಾಯಿ ಅಮೃತಾ ಗಾಯಗೊಂಡಿದ್ದಾರೆ.

ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಅಮೃತಾರನ್ನು ಗಾಯದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹಿಂಬದಿ ಕೂತಿದ್ದ ಕಾರಣ ಸಮನ್ವಿಗೆ ಹೆಚ್ಚು ಪೆಟ್ಟಾಗಿತ್ತು.


ಇದೀಗ ಟಿಪ್ಪರ್ ಚಾಲಕನನ್ನು ಕುಮಾರಸ್ವಾಮಿ ಲೇ ಔಟ್ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯಕ್ಕೆ ಸಮನ್ವಿ ಮೃತದೇಹ ಕಿಮ್ಸ್ ಆಸ್ಪತ್ರೆಯಲ್ಲಿದೆ. ಪುಟಾಣಿಯ ಸಾವಿಗೆ ನನ್ನಮ್ಮ ಸೂಪರ್ ಸ್ಟಾರ್ ತೀರ್ಪುಗಾರರಾದ ಸೃಜನ್ ಲೋಕೇಶ್, ತಾರಾ, ಅನು ಪ್ರಭಾಕರ್, ಸಹ ಸ್ಪರ್ಧಿಗಳು ಸೇರಿದಂತೆ ಅನೇಕ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :