Widgets Magazine

ಈ ಚಿತ್ರದಲ್ಲಿ ನಟಿಸಿದ್ದಕ್ಕೆ ನಯನತಾರಾ ನಾಚಿಕೆಪಡುತ್ತಾರಂತೆ. ಯಾಕೆ ಗೊತ್ತಾ?

ಚೆನ್ನೈ| pavithra| Last Modified ಶುಕ್ರವಾರ, 16 ಅಕ್ಟೋಬರ್ 2020 (07:52 IST)
ಚೆನ್ನೈ : ಲೇಡಿ ಸೂಪರ್ ಸ್ಟಾರ್ ಬಿರುದನ್ನು ಹೊಂದಿರುವ ನಯನತಾರಾ ತಮಿಳು ಚಿತ್ರರಂಗದ ಪ್ರಮುಖ ತಾರೆಯರಲ್ಲಿ ಒಬ್ಬರು. ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ, ಆದರೆ  ಈ ಒಂದು ಚಿತ್ರದಲ್ಲಿ ನಟಿಸಿದ್ದಕ್ಕೆ ತಮ್ಮ ಬಗ್ಗೆ ತಾವೇ ನಾಚಿಕೆಪಡುತ್ತಿರುವುದಾಗಿ ತಿಳಿಸಿದ್ದಾರೆ.

ಹೌದು. ನಯನತಾರಾ ಸೌಂದರ್ಯ ಮತ್ತು ಮನಮೋಹಕ ನೋಟದ ಮೂಲಕ ಅಭಿಮಾನಿಗಳ ಮನಸ್ಸನ್ನು ಸೆಳೆದಿದ್ದರು. 2003ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದರ ಮೂಲಕ  ಅವರು ಸುಮಾರು 18 ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿದ್ದು, ಅವರು ಇಲ್ಲಿಯವರೆಗೆ  68 ಚಿತ್ರಗಳಲ್ಲಿ ನಟಿಸಿದ್ದಾರಂತೆ. ಆದರೆ ಈ ಒಂದು ಚಿತ್ರದಲ್ಲಿ ನಟಿಸಿದ್ದಕ್ಕೆ ನಾಚಿಕೆಯಾಗಿದೆಯಂತೆ.

ನಯನತಾರಾ ಅಭಿನಯದ ‘ಕೋಲಿಯುತಿರ್ ಕಲಾಂ’ ಚಿತ್ರ ವಿಫಲವಾಗಿದ್ದು, ಅವರು ಈ ಚಿತ್ರ ಕಥೆಯನ್ನು ಕೇಳದೆ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರಂತೆ. ಆದಕಾರಣ ಈ ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ನಾಚಿಕೆಪಡುತ್ತೇನೆ ಎಂದು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :