ಮುಖ್ಯಮಂತ್ರಿ ಮಗ ಎಂದು ಜನ ಸಿನಿಮಾ ನೋಡಲ್ಲ: ನಿಖಿಲ್ ಕುಮಾರಸ್ವಾಮಿ ಖಡಕ್ ಮಾತು

ಬೆಂಗಳೂರು, ಶುಕ್ರವಾರ, 25 ಜನವರಿ 2019 (10:09 IST)

ಬೆಂಗಳೂರು: ಸಿನಿಮಾ ಬಿಡುಗಡೆಗೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಪುತ್ರ ನಟ, ನಿಖಿಲ್ ಗೌಡ ಸಿನಿಮಾದಲ್ಲಿ ರಾಜಕೀಯ ಬೆರೆಸಬೇಡಿ ಎಂದಿದ್ದಾರೆ.


 
ನಾನು ಮುಖ್ಯಮಂತ್ರಿ ಮಗ ಎಂಬ ಕಾರಣಕ್ಕೆ ಸಿನಿಮಾ ಮಾಡಿಲ್ಲ. ನಾವೆಲ್ಲರೂ ಒಂದು ತಂಡವಾಗಿ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಸಿನಿಮಾವೇ ಬೇರೆ, ರಾಜಕೀಯನೇ ಬೇರೆ. ನಾನು ನಮ್ಮ ಪಕ್ಷದವರಿಗೆ ಮಾತ್ರ ಸಿನಿಮಾ ಮಾಡಿಲ್ಲ. ಸಿನಿಮಾ ಎನ್ನುವುದು ಯೂನಿವರ್ಸಲ್ ಎಂದು ಖಡಕ್ ಆಗಿ ಹೇಳಿದ್ದಾರೆ.
 
ಈ ನಡುವೆ ಮಂಡ್ಯ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಾಗಿ ತಮ್ಮ ಮತ್ತು ಅಂಬರೀಶ್ ಪುತ್ರ ಅಭಿಷೇಕ್ ನಡುವೆ ಸ್ಪರ್ಧೆ ಇದೆ ಎಂಬ ಸುದ್ದಿಯಿದೆಯಲ್ಲಾ ಎಂಬ ಪತ್ರಕರ್ತ ಪ್ರಶ್ನೆಗೆ ನಕ್ಕ ನಿಖಿಲ್, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ. ಫ್ರೆಂಡ್ಸ್ ಆಗಿಯೇ ಇದ್ದೇವೆ. ಈ ಬಗ್ಗೆ ಫೋನ್ ನಲ್ಲಿ ಮಾತನಾಡುವಾಗ ತಮಾಷೆ ಮಾಡುತ್ತಿರುತ್ತೇವೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಖಾಸಗಿ ಫೋಟೋಗಳು ಲೀಕ್ ಆಗಿದ್ದಕ್ಕೆ ಕಾರಣ ಬಹಿರಂಗಪಡಿಸಿದ ನಟಿ ಹಂಸಿಕಾ ಮೊಟ್ವಾನಿ

ಮುಂಬೈ: ನಟಿ ಹಂಸಿಕಾ ಮೊಟ್ವಾನಿ ಖಾಸಗಿ ಫೋಟೋಗಳು ಲೀಕ್ ಆಗಿ ನೆಟ್ಟಿಗರು ದಿಗ್ಬ್ರಮೆ ಪಟ್ಟಿದ್ದರು. ಆದರೆ ...

news

ಕಿಚ್ಚ ಸುದೀಪ್ ಮೇಲೆ ಬಿಗ್ ಬಾಸ್ ಅಭಿಮಾನಿಗಳ ಆಕ್ರೋಶ!

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕಳೆದ ವಾರ ...

news

ಕುಮಾರಸ್ವಾಮಿ ಪುತ್ರನ ಸೀತಾರಾಮ ಕಲ್ಯಾಣ ವೀಕ್ಷಿಸಿದ ಸಿದ್ದರಾಮಯ್ಯ, ಪರಮೇಶ್ವರ್

ಬೆಂಗಳೂರು: ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಮತ್ತು ರಚಿತಾ ರಾಂ ಅಭಿನಯದ ಸೀತಾರಾಮ ಕಲ್ಯಾಣ ...

news

ಕೊನೆಗೂ ಕಲರ್ಸ್ ಕನ್ನಡದ ಒಂದು ಧಾರವಾಹಿ ಮುಗೀತು!

ಬೆಂಗಳೂರು: ಧಾರವಾಹಿಗಳು ಎಂದರೆ ಚ್ಯುಯಿಂಗ್ ಗಮ್ ಇದ್ದಂತೆ ಎಳೆಯುತ್ತಲೇ ಇರುತ್ತಾರೆ. ಅದು ಮುಗಿಯುವುದೇ ...