ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಕಿಚ್ಚ ಸುದೀಪ್ ನೆರವು

ಬೆಂಗಳೂರು| Krishnaveni K| Last Modified ಶನಿವಾರ, 17 ಅಕ್ಟೋಬರ್ 2020 (10:25 IST)
ಬೆಂಗಳೂರು: ಅತೀವ ಮಳೆಯಿಂದಾಗಿ ಉತ್ತರ ಕರ್ನಾಟಕದ ಜನ ಸೂರು ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಇವರ ನೆರವಿಗೆ ಈಗ ನಟ ಕಿಚ್ಚ ಸುದೀಪ್ ಧಾವಿಸಿದ್ದಾರೆ.

 
ಸುದೀಪ್ ತಮ್ಮ ಚ್ಯಾರಿಟೇಬಲ್ ಟ್ರಸ್ಟ್ ಮುಖಾಂತರ ನೆರೆ ಸಂತ್ರಸ್ತರಿಗೆ ನೆರವು ನೀಡಲಿದ್ದಾರೆ. ನೆರೆ ಸಂತ್ರಸ್ತರಿಗೆ ನೆರವು ನೀಡಲು ಸಹಾಯವಾಣಿ ತೆರೆದಿದ್ದು, ಅಗತ್ಯವಿದ್ದವರು ಆ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಲು ಸೂಚಿಸಲಾಗಿದೆ. ಗ್ರಾಮಸ್ಥರು 6360334455 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಕಿಚ್ಚ ಚ್ಯಾರಿಟೇಬಲ್ ಸಂಸ್ಥೆಯಿಂದ ಅವರಿದ್ದಲ್ಲಿಗೆ ನೆರವಿನ ಕಿಟ್ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :