Widgets Magazine

ಬಿಗ್ ಬಾಸ್ ಹೆಸರಲ್ಲಿ ಹಣ ಸುಲಿಗೆ ಮಾಡುವವರಿದ್ದಾರೆ ಎಚ್ಚರಿಕೆ

ಬೆಂಗಳೂರು| pavithra| Last Modified ಬುಧವಾರ, 17 ಅಕ್ಟೋಬರ್ 2018 (11:31 IST)
ಬೆಂಗಳೂರು : ಬಿಗ್ ಬಾಸ್ ಶೋ ಗೆ ಕಳುಹಿಸುವುದಾಗಿ ಹೇಳಿ ವ್ಯಕ್ತಿಯೊಬ್ಬನಿಂದ ಹಣ ಪಡೆದು ಪಂಗನಾಮ ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರಿಂಟಿಂಗ್ ಪ್ರೆಸ್ನಲ್ಲಿ ಕೆಲಸ ಮಾಡುತ್ತಿದ್ದ ಮಧುಸೂದನ್ ಎಂಬಾನಿಗೆ

ಬಿಗ್ ಬಾಸ್ ಗೆ ಹೋಗಬೇಕೆಂಬ ತುಂಬಾ ಆಸೆ ಇತ್ತು. ಇದನ್ನು ದುಪಯೋಗಪಡಿಸಿಕೊಂಡ ರಫೀಕ್ ಎಂಬಾತ ಕಲರ್ಸ್ ಗ್ರೂಪ್ ಹೆಸರು ಹೇಳಿ ಬಿಗ್​ಬಾಸ್​ಗೆ ಎಂಟ್ರಿ ಕೊಡಿಸ್ತೀನಿ ಎಂದು ಹೇಳಿದ್ದಾನೆ. ಅಲ್ಲದೇ ಬಿಗ್ ಬಾಸ್ ಮನೆಯೊಳಗೆ ರಫೀಕ್ ಬ್ರಾಂಡೆಂಡ್ ಬಟ್ಟೆ ಹಾಕಲು 57 ಸಾವಿರ ಹಣವನ್ನು ಆತನಿಂದ ಪಡೆದು ಪರಾರಿಯಾಗಿದ್ದಾನೆ.


ನಂತರ ಮಧುಸೂದನ್ ಕಲರ್ಸ್ ಗ್ರೂಪ್ ಗೆ ಕರೆ ಮಾಡಿದ್ದಾಗ ರಫೀಕ್ ಯಾರು ಅನ್ನೋದು ತಿಳಿದಿಲ್ಲ ಎಂದು ಅವರು ಉತ್ತರಿಸಿದ್ದಾರೆ. ಇದೀಗ ತನಗೆ ಆತ ಮೋಸ ಮಾಡಿರುವ
ವಿಚಾರ ತಿಳಿದ ಮಧುಸೂದನ್ ನೇರವಾಗಿ ಕಮಿಷನರ್ ಆಫೀಸ್ ಗೆ ಹೋಗಿ ಆತನ ವಿರುದ್ಧ ದೂರು ನೀಡಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ
.

ಇದರಲ್ಲಿ ಇನ್ನಷ್ಟು ಓದಿ :