Widgets Magazine

ಅಜ್ಞಾತವಾಸಿ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ್ದಕ್ಕೆ ಪವನ್ ಕಲ್ಯಾಣ್ ಅಭಿಮಾನಿಗಳಿಂದ ಯುವಕನಿಗೆ ಥಳಿತ

ಹೈದರಾಬಾದ್| Krishnaveni| Last Modified ಶುಕ್ರವಾರ, 19 ಜನವರಿ 2018 (08:24 IST)
ಹೈದರಾಬಾದ್: ಸೂಪರ್ ಸ್ಟಾರ್ ಗಳ ಮೇಲೆ ಅಭಿಮಾನಿಗಳ ಅಭಿಮಾನ ಎಷ್ಟರಮಟ್ಟಿಗೆ ಇರುತ್ತದೆ ಎಂದು ನಾವು ಹಲವು ಬಾರಿ ನೋಡಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.


ಇತ್ತೀಚೆಗಷ್ಟೇ ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಸಿನಿಮಾ ತೆರೆ ಕಂಡಿತ್ತು. ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ ಯುವಕನ ಬಗ್ಗೆ ಇದೀಗ ಪವನ್ ಅಭಿಮಾನಿಗಳು ಹಲ್ಲೆ ನಡೆಸಿರುವ ವಿಡಿಯೋ
ಅಂತರ್ಜಾಲದಲ್ಲಿ ವೈರಲ್ ಆಗಿದೆ.


ಸಿನಿಮಾ ನೋಡಿದ ಮೇಲೆ ಆ ಯುವಕ ತನ್ನ ಸಾಮಾಜಿಕ ಜಾಲತಾಣದಲ್ಲಿ ‘ಇದೂ ಒಂದು ಸಿನಿಮಾವೇ? ಬರೀ ಕೆಟ್ಟ ಸಿನಿಮಾ. ನನ್ನ ದುಡ್ಡು ವೇಸ್ಟ್’ ಎಂದು ಕಾಮೆಂಟ್ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಪವನ್ ಅಭಿಮಾನಿಗಳು ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿ ಎಚ್ಚರಿಕೆ ನೀಡಿದ್ದಾರೆ. ಇಷ್ಟೆಲ್ಲಾ ಆದರೂ ಪವನ್ ಈ ಬಗ್ಗೆ ತುಟಿ ಪಿಟಕ್ ಅಂದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :