ಪ್ರಶಾಂತ್ ಸಂಬರಗಿ ಆರೋಪ..!

ದಿವ್ಯಾ ಉರುಡುಗ ಮಾಡಿದ ತಂತ್ರಗಾರಿಕೆಯಿಂದ ಟಾಸ್ಕ್ನಲ್ಲಿ ಅರವಿಂದ್ ಗೆದ್ದ

ಬೆಂಗಳೂರು| Ramya kosira| Last Modified ಬುಧವಾರ, 7 ಜುಲೈ 2021 (17:57 IST)
Bigg Boss 8 Kannada: ಕ್ಯಾಪ್ಟನ್ ಆಗಿರುವ ದಿವ್ಯಾ ಉರುಡುಗ ಟಾಸ್ಕ್ಗಳ ಮೇಲ್ವಿಚಾರಣೆ ಮಾಡುವಾಗ ಅರವಿಂದ್ ಗೆಲ್ಲಲೆಂದು ತಂತ್ರಗಾರಿಕೆ ಮಾಡಿದ್ದಾರಂತೆ. ಹೀಗೆಂದು ಪ್ರಶಾಂತ್ ಸಂಬರಗಿ ಆರೋಪಿಸುತ್ತಿದ್ದಾರೆ.
> >
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕಾದರೆ ಪ್ರತಿವಾರ ನಡೆಯುವ ಟಾಸ್ಕ್ನಲ್ಲಿ ಗೆಲ್ಲಲೇಬೇಕು. ಇಡೀ ವಾರ ಒಂದೊಂದು ದಿನ ವಿಭಿನ್ನ ರೀತಿಯ ಟಾಸ್ಕ್ ಅನ್ನು ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಇದೇ ರೀತಿಯ ಟಾಸ್ಕ್ಗಳನ್ನು ಗೆಲ್ಲುವ ಮೂಲಕವೇ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು. ಇನ್ನು ವಾರ ಆರಂಭವಾಗುತ್ತಿದ್ದಂತೆಯೇ ಬಿಗ್ ಬಾಸ್ ಮನೆಯಲ್ಲಿ ಮೊದಲು ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಈಗ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗಿಯಾಲು ಅರ್ಹತೆ ಪಡೆದುಕೊಳ್ಳುವ ಟಾಸ್ಕ್ಗಳು ಶುರುವಾಗಿದೆ.ಅದಕ್ಕಾಗಿ ನಾನಾ ರೀತಿಯ ಟಾಸ್ಕ್ಗಳನ್ನು ಬಿಗ್ ಬಾಸ್ 10 ಮಂದಿ ಸ್ಪರ್ಧಿಗಳಿಗೆ ನೀಡಿದ್ದಾರೆ. ಜೊತೆಗೆ  ದಿವ್ಯಾ ಉರುಡುಗ ಅವರು ಕ್ಯಾಪ್ಟನ್ ಆಗಿರುವುದರಿಂದ ಅವರು ಈ ಎಲ್ಲ ಟಾಸ್ಕ್ಗಳ ಮೇಲ್ವಿಚಾರಣೆ ವಹಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಆರಂಭವಾಗುತ್ತಿದ್ದಂತೆಯೇ ಸ್ಪರ್ಧಿಗಳ ಮನಸ್ಸಿನಲ್ಲಿ ಅಸಮಾಧಾನ ಮನೆ ಮಾಡಿದೆ.
 
ನಿನ್ನೆಯೇ ಮನೆಯ ಎಲ್ಲ ಸ್ಪರ್ಧಿಗಳಿಗೂ ಹಣ ಸಂಪಾದಿಸಲು ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಅದರಲ್ಲಿ 10 ಮಂದಿ ಗೆಲ್ಲುವ ಮೂಲಕ 2 ಸಾವಿರ ಹಣ ಸಂಪಾದಿಸಿದ್ದಾರೆ. ಇಂದು ಈಗ ಮತ್ತೆ ವಿಭಿನ್ನವಾದ ಟಾಸ್ಕ್ಗಳನ್ನು ಕೊಟ್ಟಿದ್ದಾರೆ. ಈ ಟಾಸ್ಕ್ಗಳಲ್ಲಿ ಗೆದ್ದು ಹೆಚ್ಚು ಹಣ ಪಡೆಯುವ ಸ್ಪರ್ಧಿ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹರಾಗುತ್ತಾರೆ.
 
 
 ಇದರಲ್ಲಿ ಇನ್ನಷ್ಟು ಓದಿ :