Widgets Magazine

ಸಂಜನಾ ಇಸ್ಲಾಂಗೆ ಮತಾಂತರಗೊಂಡು ಎರಡು ವರ್ಷವಾಗಿದೆ: ಪ್ರಶಾಂತ್ ಸಂಬರಗಿ

ಬೆಂಗಳೂರು| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (09:36 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ಸಂಜನಾ ಗಲ್ರಾನಿ ಎರಡು ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

 
ಅವರ ಈ ಹೇಳಿಕೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಸಂಜನಾ 2018 ರಲ್ಲೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈಗ ಅವರ ಹೆಸರು ಮಾಹಿರಾ. ನಮ್ಮ ಕರ್ನಾಟಕದಲ್ಲಿ ಲವ್ ಜಿಹಾದ್ ತಾಂಡವವಾಡುತ್ತಿದೆ ಎಂದು ಪ್ರಶಾಂತ್ ಹೇಳಿಕೆ ನೀಡಿದ್ದಾರೆ. ಸಂಜನಾ ಮತ್ತು ಅಝೀಜ್ ಪಾಶಾ ವಿವಾಹವಾಗಿದ್ದರು ಎಂದು ಮೊನ್ನೆಯಷ್ಟೇ ಸುದ್ದಿ ಓಡಾಡಿತ್ತು. ಇದರ ಬೆನ್ನಲ್ಲೇ ಪ್ರಶಾಂತ್ ಈ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :