ವೈದ್ಯರಿಗೆ ಪ್ರೇಮಂ ಪೂಜ್ಯಂ ಸಿನಿಮಾ ತಂಡದ ಕೊಡುಗೆ

ಬೆಂಗಳೂರು| Krishnaveni K| Last Modified ಭಾನುವಾರ, 2 ಮೇ 2021 (09:44 IST)
ಬೆಂಗಳೂರು: ನೆನಪಿರಲಿ ಪ್ರೇಮ್ ನಾಯಕರಾಗಿರುವ ‘ಪ್ರೇಮಂ ಪೂಜ್ಯಂ’ ಸಿನಿಮಾ ತಂಡ ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ ಹಾಡೊಂದನ್ನು ಕೊಡುಗೆಯಾಗಿ ನೀಡಿದೆ.
 

ಕೊರೋನಾ ವಾರಿಯರ್ಸ್ ಮತ್ತು ವೈದ್ಯರಿಗೆ ಸ್ಪೂರ್ತಿ ತುಂಬುವ ‘ವೈದ್ಯೋ ನಾರಾಯಣೋ ಹರಿ’ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ.
 
ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಹಾಡನ್ನು ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಡಾ. ರಾಘವೇಂದ್ರ ಈ ಹಾಡಿನ ಸಾಹಿತ್ಯ ಬರೆದಿದ್ದರು. ಇದು ನಮಗಾಗಿ ಹಗಲು-ರಾತ್ರಿ ದುಡಿಯುತ್ತಿರುವ ವಾರಿಯರ್ಸ್ ಗೆ ಅರ್ಪಣೆ ಎಂದು ಚಿತ್ರತಂಡ ಹೇಳಿದೆ.
ಇದರಲ್ಲಿ ಇನ್ನಷ್ಟು ಓದಿ :