ಪುನೀತ್ ರಾಜಕುಮಾರ್ ಜೇಮ್ಸ್ ಸಿನಿಮಾಗೆ ಇವರೇ ನಾಯಕಿ

ಬೆಂಗಳೂರು| Krishnaveni K| Last Modified ಗುರುವಾರ, 15 ಅಕ್ಟೋಬರ್ 2020 (09:30 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮುಂದಿನ ಚಿತ್ರ ಜೇಮ್ಸ್. ಯುವರತ್ನ ಸಿನಿಮಾ ಮುಗಿಸಿರುವ ಪುನೀತ್ ಮುಂದೆ ಜೇಮ್ಸ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

 
ಈ ಸಿನಿಮಾದ ನಾಯಕಿ ಯಾರೆಂಬ ವಿಚಾರ ಈಗ ಪಕ್ಕಾ ಆಗಿದೆ. ಚಿತ್ರಕ್ಕೆ ‘ರಾಜಕುಮಾರ’ ಸಿನಿಮಾದಲ್ಲಿ ಪುನೀತ್ ಗೆ ಜೋಡಿಯಾಗಿದ್ದ ಪ್ರಿಯಾ ಆನಂದ್ ನಾಯಕಿಯಾಗಲಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಹಾಗೂ ಸ್ವತಃ ಪ್ರಿಯಾ ಆನಂದ್ ಪಕ್ಕಾ ಮಾಡಿದ್ದಾರೆ. ಇವರಲ್ಲದೆ, ನಟಿ ಅನುಪ್ರಭಾಕರ್ ಕೂಡಾ ಚಿತ್ರತಂಡ ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :