ಕುರುಕ್ಷೇತ್ರ, ಕೆಂಪೇಗೌಡ 2 ಸಿನಿಮಾ ಬಗ್ಗೆ ಟ್ವೀಟ್ ಮಾಡಿದ ಪುನೀತ್ ರಾಜ್ ಕುಮಾರ್ ಗೆ ಟ್ವಿಟರಿಗರು ಹೇಳಿದ್ದೇನು ಗೊತ್ತಾ?

ಬೆಂಗಳೂರು, ಶನಿವಾರ, 10 ಆಗಸ್ಟ್ 2019 (09:43 IST)

ಬೆಂಗಳೂರು: ನಿನ್ನೆ ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಮತ್ತು ಕೋಮಲ್ ಅಭಿನಯದ ಕೆಂಪೇಗೌಡ 2 ಸಿನಿಮಾ ಬಿಡುಗಡೆಯಾಗಿತ್ತು.


 
ಈ ಎರಡೂ ಸಿನಿಮಾಗಳನ್ನು ಪ್ರೋತ್ಸಾಹಿಸುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿದ್ದೇ ತಡ ಅಭಿಮಾನಿಗಳು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.
 
ಸಿನಿಮಾ ಬಗ್ಗೆ ಟ್ವೀಟ್ ಮಾಡುವ ಬದಲು ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿಗೆ ನೆರವಾಗುವಂತೆ ಮನವಿ ಮಾಡಿ. ಅದರ ಬಗ್ಗೆ ಒಂದೇ ಒಂದು ಮಾತು ಹೇಳಿಲ್ಲವಲ್ಲಾ ಅಪ್ಪು ಸರ್ ಎಂದು ಅಭಿಮಾನಿಗಳು ಬೇಸರದಿಂದಲೇ ಟ್ವೀಟ್ ಮಾಡಿದ್ದರು.
 
ಇದಾದ ಕೆಲವೇ ನಿಮಿಷಗಳಲ್ಲಿ ಪುನೀತ್ ವಿಡಿಯೋ ಸಂದೇಶ ಪ್ರಕಟಿಸಿದ್ದು, ನೆರೆ ಪೀಡಿತ ಪ್ರದೇಶದ ಜನರಿಗೆ ನೆರವಾಗೋಣ ಎಂದು ಕರೆ ನೀಡಿದ್ದಾರೆ. ಅಲ್ಲದೆ, ನನ್ನಿಂದ ಆದ ಸಹಾಯವನ್ನು ನಾನೂ ಮಾಡ್ತಿದ್ದೀನೆ, ನೀವೂ ನೆರವಾಗಿ ಎಂದು ಕರೆಕೊಟ್ಟಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ರಾಕಿಂಗ್ ಸ್ಟಾರ್ ಯಶ್ ಯಶೋಮಾರ್ಗದ ನೆರವು

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನೇತೃತ್ವದ ಯಶೋಮಾರ್ಗ ಸಂಸ್ಥೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ...

news

ಗೆಳತಿ ಅನುಷ್ಕಾಗಾಗಿ ಸಾಹೋ ಸ್ಪೆಷಲ್ ಸ್ಕ್ರೀನಿಂಗ್ ಮಾಡಲಿದ್ದಾರಾ ಪ್ರಭಾಸ್?!

ಹೈದರಾಬಾದ್: ನಮ್ಮ ನಡುವೆ ಏನೂ ಇಲ್ಲ ಎಂದು ಇಬ್ಬರೂ ಅಲ್ಲಗಳೆಯುತ್ತಿದ್ದರೂ ಪ್ರಭಾಸ್ ಮತ್ತು ಅನುಷ್ಕಾ ನಡುವೆ ...

news

ಪೌರ ಕಾರ್ಮಿಕರೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿಕೊಂಡ ನಟಿ ತಾರಾ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆ ಜೋರಾಗಿ ನಡೆಯುತ್ತಿದ್ದು, ಸೆಲೆಬ್ರಿಟಿಗಳೂ ಸಂಭ್ರಮದಿಂದ ಹಬ್ಬದ ...

news

ಕುರುಕ್ಷೇತ್ರ ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ಏನಂತಾರೆ ಗೊತ್ತಾ?

ಬೆಂಗಳೂರು: ಬಹುನಿರೀಕ್ಷೆಯ ಕುರುಕ್ಷೇತ್ರ ಸಿನಿಮಾ ಬಿಡುಗಡೆಯಾಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ...