ಎರಡನೇ ಮಗುವಾದ ಬಳಿಕ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್

ಬೆಂಗಳೂರು| Krishnaveni K| Last Modified ಮಂಗಳವಾರ, 5 ನವೆಂಬರ್ 2019 (09:07 IST)
ಬೆಂಗಳೂರು: ಎರಡನೇ ಮಗುವಿನ ಆಗಮನದ ಖುಷಿಯಲ್ಲಿರುವ ನಟಿ ರಾಧಿಕಾ ಪಂಡಿತ್ ತಮಗೆ ಶುಭ ಹಾರೈಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ ಧನ್ಯವಾದ ಸಲ್ಲಿಸಿದ್ದಾರೆ.

 
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾಗೆ ಮೊನ್ನೆಯಷ್ಟೇ ಗಂಡು ಮಗುವಾಗಿದೆ. ಎರಡನೇ ಬಾರಿಗೆ ತಂದೆಯಾದ ಖುಷಿಯಲ್ಲಿ ರಾಕಿಂಗ್ ಸ್ಟಾರ್ ಮೊನ್ನೆಯೇ ಇನ್ ಸ್ಟಾಗ್ರಾಂ ಮೂಲಕ ಅಭಿಮಾನಿಗಳಿಗೆ ವಿಶಿಷ್ಟವಾಗಿ ಸಿಹಿ ಸುದ್ದಿ ಹಂಚಿಕೊಂಡು ಧನ್ಯವಾದ ಸಲ್ಲಿಸಿದ್ದರು.
 
ಇದೀಗ ರಾಧಿಕಾ ಸರದಿ. ಹೆರಿಗೆಯ ಬಳಿಕ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಿಂದ ದೂರವಿದ್ದ ರಾಧಿಕಾ ಈಗ ತಮಗೆ ಶುಭ ಹಾರೈಸಿದವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ ಯಶ್ ಹಾಗೂ ಪುತ್ರಿ ಐರಾ ಜತೆಗಿನ ಮುದ್ದಾದ ಫ್ಯಾಮಿಲಿ ಫೋಟೋವನ್ನು ಪ್ರಕಟಿಸಿದ್ದಾರೆ. ಆದರೆ ಎರಡನೇ ಮಗುವಿನ ಫೋಟೋವನ್ನು ರಾಕಿಂಗ್ ದಂಪತಿ ಬಿಟ್ಟುಕೊಟ್ಟಿಲ್ಲ.
ಇದರಲ್ಲಿ ಇನ್ನಷ್ಟು ಓದಿ :