ಹಿರಿಯ ನಟ ರಾಜಾರಾಂ ಕೊರೋನಾಗೆ ಬಲಿ

ಬೆಂಗಳೂರು| Krishnaveni K| Last Modified ಮಂಗಳವಾರ, 11 ಮೇ 2021 (09:18 IST)
ಬೆಂಗಳೂರು: ಕೊರೋನಾದಿಂದ ಮತ್ತೊಬ್ಬ ಸ್ಯಾಂಡಲ್ ವುಡ್ ತಾರೆ ಇಹಲೋಕದ ಪಯಣ ಮುಗಿಸಿದ್ದಾರೆ. ಹಿರಿಯ ನಟ ರಾಜಾರಾಂ ಕೊರೋನಾಗೆ ಬಲಿಯಾಗಿದ್ದಾರೆ.

 
ಸಿನಿಮಾ, ಕಿರುತೆರೆ ಧಾರವಾಹಿ ಮತ್ತು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ರಾಜಾರಾಂ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
 
ಅವರ ನಿಧನಕ್ಕೆ ನಟ ಸೃಜನ್ ಲೋಕೇಶ್, ರಾಜಾರಾಂ ಅಭಿನಯಿಸಿದ್ದ ಜೊತೆ ಜೊತೆಯಲಿ ಧಾರವಾಹಿ ನಾಯಕಿ ಆಶಿತಾ ಚಂದ್ರಪ್ಪ ಭಾವುಕ ಸಂದೇಶ ಬರೆದು ಸಂತಾಪ ವ್ಯಕ್ತಪಡಿಸಿದ್ದಾರೆ. ತಾತ, ತಂದೆಯ ಪಾತ್ರಗಳಲ್ಲೇ ಮಿಂಚುತ್ತಿದ್ದ ರಾಜಾರಾಂ ಸಹಜ ಅಭಿನಯದ ಮೂಲಕ ಎಲ್ಲರಿಗೂ ಇಷ್ಟವಾಗಿದ್ದರು.
ಇದರಲ್ಲಿ ಇನ್ನಷ್ಟು ಓದಿ :