ರಶ್ಮಿಕಾಗೆ ಬರ್ತ್ ಡೇ ವಿಶ್ ಮಾಡುವಾಗ ರಕ್ಷಿತ್ ಎಡವಟ್ಟು: ನೀವು ಹೇಳಿದ್ದೇ ಸರಿ ಎಂದ ಫ್ಯಾನ್ಸ್!

ಬೆಂಗಳೂರು| Krishnaveni K| Last Modified ಮಂಗಳವಾರ, 6 ಏಪ್ರಿಲ್ 2021 (07:11 IST)
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣಗೆ ಬರ್ತ್ ಡೇ ವಿಶ್ ಮಾಡಲು ಹೋಗಿ ರಕ್ಷಿತ್ ಶೆಟ್ಟಿ ಎಡವಟ್ಟು ಮಾಡಿಕೊಂಡು ಟ್ರೋಲ್ ಗೊಳಗಾಗಲಿದ್ದಾರೆ.
 

ರಶ್ಮಿಕಾ ಮಂದಣ್ಣಗೆ ಬರ್ತ್ ಡೇ ವಿಶ್ ಮಾಡುವಾಗ ರಕ್ಷಿತ್ ‘ವಾರಿಯರ್’ ಎನ್ನುವ ಬದಲು ‘ವರೀಯರ್’ ಎಂದು ಸ್ಪೆಲ್ಲಿಂಗ್ ತಪ್ಪಾಗಿ ಬರೆದಿದ್ದರು. ವರೀಯರ್ ಎಂದರೆ ಚಿಂತೆ ಕೊಡುವವರು ಎಂದರ್ಥ. ಎಲ್ಲವನ್ನೂ ಗೆಲ್ಲುವ ಎಂಬ ಅರ್ಥ ಕೊಡುವ ‘ವಾರಿಯರ್’ ಎಂಬ ಶಬ್ಧವನ್ನು ಬರೆಯಬೇಕಾಗಿದ್ದವರು ಈ ರೀತಿ ಎಡವಟ್ಟು ಮಾಡಿಕೊಂಡಿದ್ದರು.
 
ಇದನ್ನು ನೋಡಿ ರಕ್ಷಿತ್ ಅಭಿಮಾನಿಗಳು ‘ಸರಿಯಾಗಿಯೇ ಬರೆದಿದ್ದೀರಿ ಬಿಡಿ. ರಶ್ಮಿಕಾ ನಿಮ್ಮ ಪಾಲಿಗೆ ನಿಜಕ್ಕೂ ಚಿಂತೆ ಕೊಟ್ಟವಳು’ ಎಂದು ತಮಾಷೆ ಮಾಡಿದ್ದಾರೆ. ತಮ್ಮ ಎಡವಟ್ಟು ಅರಿವಾಗುತ್ತಿದ್ದಂತೇ ರಕ್ಷಿತ್ ತಪ್ಪು ತಿದ್ದಿಕೊಂಡಿದ್ದಾರೆ. ಆದರೂ ಅಷ್ಟರಲ್ಲಿ ಅವರ ಮೊದಲಿನ ಸಂದೇಶ ಎಲ್ಲೆಡೆ ತಲುಪಿಯಾಗಿತ್ತು.
ಇದರಲ್ಲಿ ಇನ್ನಷ್ಟು ಓದಿ :