ವೈಮನಸ್ಯಗಳೆಲ್ಲಾ ಮರೆಯಾಯ್ತು, ನಾವಿಬ್ಬರೂ ಒಂದೇ ಎಂದ ದರ್ಶನ್-ರಕ್ಷಿತಾ

ಬೆಂಗಳೂರು| Krishnaveni K| Last Modified ಗುರುವಾರ, 29 ಜುಲೈ 2021 (09:36 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ದೇಶಕ ಪ್ರೇಮ್ ಬಗ್ಗೆ ನೀಡಿದ ಹೇಳಿಕೆಯಿಂದಾಗಿ ಎರಡೂ ಕುಟುಂಬಗಳ ನಡುವೆ ಅಸಮಾಧಾನ ಮೂಡಿತ್ತು. ಆದರೆ ಈಗೆಲ್ಲವೂ ಮರೆಯಾಗಿದೆ ಎಂದು ರಕ್ಷಿತಾ ಸಾರಿದ್ದಾರೆ.

 
ರಕ್ಷಿತಾ ಮತ್ತು ದರ್ಶನ್ ಪರಮಾಪ್ತ ಮಿತ್ರರು. ಆದರೆ ಪ್ರೇಮ್ ಬಗ್ಗೆ ದರ್ಶನ್ ನೀಡಿದ ಹೇಳಿಕೆಯಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗಿತ್ತು. ಈ ಸಂದರ್ಭದಲ್ಲಿ ಹಲವರು ನೀವು ಯಾರ ಪರ ನಿಲ್ಲುತ್ತೀರಿ ಎಂದು ರಕ್ಷಿತಾರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರನ್ನೂ ಬಿಟ್ಟುಕೊಡಲಾರೆ ಎಂದಿದ್ದರು.
 
ಇದೀಗ ದರ್ಶನ್ ಜೊತೆಗಿನ ಫೋಟೋ ಪ್ರಕಟಿಸಿರುವ ರಕ್ಷಿತಾ ‘ಕೆಲವು ಸಂಬಂಧಗಳು ಎಂದೆಂದಿಗೂ ಅಮರ. ನನಗೆ ಗೊತ್ತು, ನೀನು ಯಾವತ್ತೂ ನನ್ನ ಜೊತೆಗೆ ಇರುತ್ತೀ ಎಂದು ನನಗೆ ಗೊತ್ತು’ ಎಂದು ಬರೆದುಕೊಂಡಿದ್ದಾರೆ. ಇವರಿಬ್ಬರ ಈ ಫೋಟೋ ನೋಡಿ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದಾರೆ. ಪ್ರೇಮ್-ದರ್ಶನ್ ವೈಮನಸ್ಯಗಳೇನೇ ಇದ್ದರೂ ಇಬ್ಬರ ಸ್ನೇಹಕ್ಕೆ ಧಕ್ಕೆ ತಂದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ.
ಇದರಲ್ಲಿ ಇನ್ನಷ್ಟು ಓದಿ :