ರಾಂಧವನಿಗಾಗಿ ಬಂದ ಟೈಟಾನಿಕ್ ಚೆಲುವೆ!

ಬೆಂಗಳೂರು, ಮಂಗಳವಾರ, 13 ಆಗಸ್ಟ್ 2019 (16:12 IST)

ಒಂದು ಸಿನಿಮಾದಲ್ಲಿ ಎಷ್ಟೆಲ್ಲ ಬೆರಗುಗಳನ್ನು ಬಚ್ಚಿಟ್ಟುಕೊಳ್ಳಬಹುದೆಂಬ ಅಂದಾಜನ್ನೂ ಮೀರಿಕೊಂಡಿರೋ ಚಿತ್ರ ರಾಂಧವ. ಕಥೆ, ತಾಂತ್ರಿಕ ವಿಭಾಗ, ಸಂಗೀತ ಮತ್ತು ಪಾತ್ರಗಳು ಸೇರಿದಂತೆ ಇಲ್ಲಿ ಬೇರಗುಗಳು ಜಾತ್ರ ನೆರೆದಿವೆ. ನಿರ್ದೇಶಕ ವರ್ಷಾಂತರಗಳ ಕಾಲ ಶ್ರಮ ವಹಿಸಿ ಅಂಥಾ ಆಯಸ್ಕಾಂತೀಯ ಸೆಳೆಯಗಳೊಂದಿಗೆ ರಾಂಧವನನ್ನು ರೂಪಿಸಿದ್ದಾರೆ. ಬರೀ ದೃಷ್ಯ ಕಟ್ಟುವಲ್ಲಿನ ಶ್ರದ್ಧೆಗೆ ಮಾತ್ರವೇ ಸೀಮಿತವಾಗದ ಸಣ್ಣ ಸಣ್ಣ ಪಾತ್ರಗಳಿಗೂ ಅಳೆದೂ ತೂಗಿಯೇ ಕಲಾವಿದರನ್ನು ಆಯ್ಕೆ ಮಾಡಿದ್ದಾರೆ.
randhava
ಈ ಚಿತ್ರದಲ್ಲಿ ಬ್ರಿಟಿಶ್ ಮಹಿಳೆಯ ಪಾತ್ರವೊಂದಿದೆ. ಇಡೀ ಕಥೆಯಲ್ಲಿ ಮಹತ್ತರ ಪಾತ್ರ ವಹಿಸೋ ಈ ಕ್ಯಾರೆಕಟ್ರಿಗಾಗಿ ಯಾರನ್ನು ಆಯ್ಕೆ ಮಾಡೋದೆಂಬುದೇ ಆರಂಭದಲ್ಲಿ ಗೊಂದಲ ಹುಟ್ಟಿಸಿತ್ತು. ಕಡೆಗೂ ಆ ಪಾತ್ರಕ್ಕಾಗಿ ಖ್ಯಾತ ಹಾಲಿವುಡ್ ತಾರೆಯನ್ನು ಕರೆತರಲಾಗಿದೆ. ಹಾಗೆ ಈ ಸಿನಿಮಾ ಮೂಲಕ ಟೈಟಾನಿಕ್ ಚೆಲುವೆ ಕೇಟ್ ವಿನ್ಸ್ಲೆಟ್ ಕನ್ನಡಕ್ಕೆ ಆಗಮಿಸಿದ್ದಾರೆ.
 
ಪ್ರಸಿದ್ದ ಟೈಟಾನಿಕ್ ಚಿತ್ರವನ್ನು ನೋಡಿದವರಿಗೆ ಅದರ ನಾಯಕಿಯಾಗಿದ್ದ ಕೇಟ್ ಅವರ ಪರಿಚಯ ಇದ್ದೇ ಇರುತ್ತದೆ. ಈ ಸಿನಿಮಾ ಮೂಲಕವೇ ವಿಶ್ವಾಶದ್ಯಂತ ಖ್ಯಾತಿ ಹೊಂದಿರೋ ಕೇಟಿ ಚಿತ್ರದಲ್ಲಿ ಬ್ರಿಟಿಶ್ ಮಹಿಳೆಯಾಗಿ ನಟಿಸಿದ್ದಾರೆ. ಆ ಪಾತ್ರ ಇಡೀ ಕಥೆಗೆ ಊಹಿಸಲಾರದಂಥಾ ತಿರುವುಗಳನ್ನು ತಂದು ಕೊಡಲಿದೆ. ಅಷ್ಟಕ್ಕೂ ಹಾಲಿವುಡ್ನ ಈ ಪ್ರಸಿದ್ಧ ನಾಯಕಿ ಕನ್ನಡ ಚಿತ್ರದಲ್ಲಿ ನಟಿಸಿರೋದೇ ವಿಶೇಷ. ಆದ್ದರಿಂದಲೇ ಅವರ ಪಾತ್ರವೂ ರಾಂಧವನ ವಿಶೇಷತೆಗಳ ಪಟ್ಟಿಯಲ್ಲಿ ಪ್ರಧಾನವಾಗಿ ಪರಿಗಣಿಸಲ್ಪಟ್ಟಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ರಾಂಧವನಿಗೂ ಶ್ರೀಲಂಕೆಗೂ ಇದೆಂಥಾ ನಂಟು?

ಭುವನ್ ಪೊನ್ನಣ್ಣ ನಾಯಕನಾಗಿ ನಟಿಸಿರೋ ರಾಂಧವ ಚಿತ್ರದ ಹಿನ್ನೆಲೆಯಲ್ಲಿ ವಿಶೇಷತೆ ಮತ್ತು ಬೆರಗುಗಳ ಸಂತೆಯೇ ...

news

ಈ ರಾಂಧವ ನೈಜ ಸಾಹಸ ನಿಪುಣ!

ಭುವನ್ ಪೊನ್ನಣ್ಣ ಬಿಗ್ಬಾಸ್ ಸ್ಪರ್ಧಿಯಾಗಿ ಬಂದ ನಂತರದಲ್ಲಿ ನಟಿಸಿರೋ ಮೊದಲ ಚಿತ್ರ ರಾಂಧವ. ಬಹುಶಃ ...

news

ನವ ತಂತ್ರಜ್ಞಾನಗಳಿಂದ ಮನ ಸೆಳೆಯಲಿರೋ ರಾಂಧವ!

ಸದ್ಯದ ವಾತಾವರಣದಲ್ಲಿ ಸಿನಿಮಾವೊಂದು ಜನರನ್ನು ಸೆಳೆಯಬೇಕೆಂದರೆ ತಾಂತ್ರಿಕವಾಗಿಯೂ ಹೊಸತನ ಅಳವಡಿಸಿಕೊಳ್ಳಲೇ ...

news

ಲವರ್ ಬಾಯ್ ಆಗಲೊಲ್ಲದ ರಗಡ್ ರಾಂಧವ!

ಸುನೀಲ್ ಆಚಾರ್ಯ ನಿರ್ದೇಶನದ ರಾಂಧವ ಇದೇ ತಿಂಗಳ ಇಪ್ಪತ್ಮೂರನೇ ತಾರೀಕಿನಂದು ತೆರೆಗೆ ಬರಲು ಮಹೂರ್ತ ...