100 ಕೋಟಿ ಕ್ಲಬ್ ಸೇರಿಕೊಂಡ ರಾಬರ್ಟ್ ಸಿನಿಮಾ

ಬೆಂಗಳೂರು| Krishnaveni K| Last Modified ಗುರುವಾರ, 1 ಏಪ್ರಿಲ್ 2021 (09:45 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಿರೀಕ್ಷೆಯಂತೆಯೇ 100 ಕೋಟಿ ಕ್ಲಬ್ ಸೇರಿಕೊಂಡಿದೆ.
 > ಗಳಿಕೆ ವಿಚಾರದಲ್ಲಿ ಮೊದಲ ದಿನವೇ ದಾಖಲೆ ಮಾಡಿದ್ದ ರಾಬರ್ಟ್ ಈಗ 21 ದಿನ ಪೂರೈಸಿದ್ದು, ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಕೊಳ್ಳೆ ಹೊಡೆದು ದಾಖಲೆ ಮಾಡಿದೆ.>   ಇದಕ್ಕೂ ಮೊದಲು ಕೆಜಿಎಫ್, ಕುರುಕ್ಷೇತ್ರ ಸಿನಿಮಾ 100 ಕೋಟಿ ಗಳಿಕೆ ಮಾಡಿತ್ತು. ಅದಾದ ಬಳಿಕ ಈಗ ರಾಬರ್ಟ್ ಆ ದಾಖಲೆ ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾದ ರಾಬರ್ಟ್ ಈಗಲೂ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದರೊಂದಿಗೆ ತಾವು ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವುದನ್ನು ದರ್ಶನ್ ಮತ್ತೆ ಪ್ರೂವ್ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :