ಕೆಜಿಎಫ್ 2 ನೋಡಬೇಕಾದರೆ 21 ದಿನ ಮನೆಯಲ್ಲೇ ಇರಿ!

ಬೆಂಗಳೂರು| Krishnaveni K| Last Modified ಗುರುವಾರ, 26 ಮಾರ್ಚ್ 2020 (09:20 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಮನೆಯಲ್ಲೇ ಕೂರಬೇಕೆಂದರೂ ಆದೇಶ ಉಲ್ಲಂಘಿಸುವವರಿಗಾಗಿ ಯಶ್ ಅಭಿಮಾನಿ ಬಳಗ ವಿಶಿಷ್ಟ ಕರೆ ನೀಡಿದೆ.
 

ಸಾಮಾಜಿಕ ಜಾಲತಾಣದಲ್ಲಿ ಯಶ್ ಅಭಿಮಾನಿಗಳ ಬಳಗ ನಿಮಗೆ ವೀಕ್ಷಿಸುವ ಆಸೆಯಿದ್ದರೆ ಮುಂದಿನ 21 ದಿನ ಮನೆಯಲ್ಲೇ ಇರಿ ಎಂದು ಕರೆ ನೀಡಿದ್ದಾರೆ!
 
ಸರ್ಕಾರಗಳು ಎಷ್ಟೇ ಆದೇಶಿಸಿದರೂ ಹೊರಗಡೆ ತಿರುಗಾಡುತ್ತಿರುವ ಜನಸಾಮಾನ್ಯರಿಗೆ ಯಶ್ ಅಭಿಮಾನಿ ಬಳಗ ಈ ರೀತಿ ಆಫರ್ ನೀಡಿದೆ. ಕೊರೋನಾ ತಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಆಕರ್ಷಣೀಯ ಪೋಸ್ಟರ್ ಗಳು, ಒಕ್ಕಣೆಗಳ ಮೂಲಕ ಮನೆಯಲ್ಲೇ ಇರುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :