ಹೆಣ್ಣು ಮಗುವಿಗೆ ತಂದೆಯಾದ ರಾಕಿಂಗ್ ಸ್ಟಾರ್ ಯಶ್

ಬೆಂಗಳೂರು| pavithra| Last Updated: ಭಾನುವಾರ, 2 ಡಿಸೆಂಬರ್ 2018 (08:25 IST)
ಬೆಂಗಳೂರು : ಕೊನೆಗೂ ಸ್ಯಾಂಡಲ್ ವುಡ್ ನ ನಟ ರಾಕಿಂಗ್ ಸ್ಟಾರ್ ಯಶ್ ಕನಸು ನನಸಾಗಿದೆ.
ಭಾನುವಾರ (ಇಂದು) ರಾಕಿಂಗ್ ಸ್ಟಾರ್ ಯಶ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.


ಹೌದು. ಇಂದು ಬೆಳಗ್ಗೆ 6.10 ನಿಮಿಷಕ್ಕೆ
ನಟ ಯಶ್ ಪತ್ನಿ ನಟಿ
ರಾಧಿಕಾ ಪಂಡಿತ್ ಖಾಸಗಿ
ಆಸ್ಪತ್ರೆ
ಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿಂದೆ ನಟ ಯಶ್ ತಮಗೆ ಹೆಣ್ಣು ಮಗು ಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ಅವರಿಗೆ ಮಗಳು ಜನಿಸಿದ್ದಾಳೆ.


ಈ ವಿಚಾರ ಕೇಳಿ ರಾಕಿಂಗ್ ಕುಟುಂಬಸ್ಥರು ಸಂತೋಪಗೊಂಡಿದ್ದಾರೆ.
ಅಲ್ಲದೇ ಇದೇ ತಿಂಗಳು ಡಿಸೆಂಬರ್ 21ರಂದು ಯಶ್ ಅಭಿನಯದ ಕೆಜಿಎಫ್ ರಿಲೀಸ್ ಆಗುತ್ತಿದ್ದು,
ಇದೀಗ ಅಭಿಮಾನಿಗಳಿಗೆ ಡಬಲ್ ಖುಷಿ
ಸಿಕ್ಕಂತಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :